ದಕ್ಷಿಣ ಭಾರತ ಮಟ್ಟದ ವಿಮೆನ್ಸ್ ಖೇಲೋ ಇಂಡಿಯಾ ಪಂದ್ಯಾಟ: ಆಯಿಶಾ ಹೈಫಾಗೆ ಚಿನ್ನದ ಪದಕ

ಮಂಗಳೂರು: ತಮಿಳುನಾಡಿನ ಕೊಂಗುನಾಡು ಇಂಜಿನಿಯರಿಂಗ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ASMITHA ಖೇಲೋ ಇಂಡಿಯಾ ಪೆಂಕಾಕ್ ಸಿಲಾತ್ (ಇಂಡೋನೇಶಿಯನ್ ಮಾರ್ಷಲ್ ಆರ್ಟ್ಸ್) ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಯಿಶಾ ಹೈಫಾ ಚಿನ್ನ ಗೆದ್ದಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಿನ್ಯ ಗ್ರಾಮದ ಮೊಯಿದಿನ್ ಹನೀಫ್ ಫಾತಿಮಾ ದಂಪತಿಯ ಪುತ್ರಿ. ಮೊದಲ ಪ್ರಯತ್ನದಲ್ಲೇ ಅಮೋಘ ಪ್ರದರ್ಶನದ ಮೂಲಕ ಚಿನ್ನದ ಪದಕ ಗೆದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಆಸೀಫ್ ಕಿನ್ಯ ಹಾಗೂ ಅಯಾಝ್ ಬರುವ ಅವರಿಂದ ತರಬೇತಿ ಪಡೆದಿದ್ದಾರೆ.
Next Story





