ಹಳೆಯಂಗಡಿ: ತಖ್ವಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಉದ್ಘಾಟನೆ

ಹಳೆಯಂಗಡಿ: ಇಲ್ಲಿನ ಹಳೆಯಂಗಡಿ ಇಂದಿರಾನಗರದ ರೈಲ್ವೇ ಗೇಟ್ ಬಳಿ ನೂತನವಾಗಿ ನಿರ್ಮಾಣಗೊಂಡ ತಖ್ವಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ನ ಉದ್ಘಾಟನಾ ಸಮಾರಂಭವು ಶುಕ್ರವಾರ ನೆರವೇರಿತು.
ತಖ್ವಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ್ನು ಉದ್ಘಾಟಿಸಿ ಖುತುಬಾ, ಜುಮಾಅ ನಮಾಜ್ ನಿರ್ವಿಸಿದ ಬಳಿಕ ಮಾತನಾಡಿದ ಅಬ್ದುರ್ರಹ್ಮಾನ್ ಸಲಫಿ ಅವರು, ದೇಶದಲ್ಲಿ ಯಾವುದೇ ರೀತಿಯಲ್ಲಿ ಭಿಕ್ಷಾಟನೆ ಮಾಡುತ್ತಿರುವವರಲ್ಲಿ ಮುಸ್ಲಿಂ ಸಮುದಾಯ ಪ್ರಥಮ ಸ್ಥಾನದಲ್ಲಿದೆ. ಅಸಹಾಯಕರಿಗೆ ಸಮುದಾಯ ಒಂದಾಗಿ ಸಹಾಯ ಹಸ್ತ ಚಾಚಿದರೆ ಶಾಂತಿ ಸೌಹಾದರ್ ಸಾರುವ ಸರ್ವರನ್ನೂ ಸಮಾನವಾಗಿಕಾಣು ಎಂಬುವ ಇಸ್ಲಾಂ ಧರ್ಮದ ಮೂಲ ತತ್ವಕ್ಕೆ ಅರ್ಥಬರುತ್ತದೆ ಎಂದರು.
ಕಲ್ಚರಲ್ ಸೆಂಟರ್‌ನ ಕಾನ್ಪರೆನ್ಸ್ ಹಾಲ್‌ನ್ನು ಕೆಪಿಸಿಸಿ ಸದಸ್ಯ ವಸಂತ್ ಬರ್ನಾರ್ಡ್ ಉದ್ಘಾಟಿಸಿದರು. ಸೆಂಟರ್‌ನ ವತಿಯಿಂದ ಪಶು ವೈದ್ಯ ಕೇಂದ್ರದ ಸುತ್ತ ಹಾಸಲಾಗಿರುವ ಇಂಟರ್ ಲಾಕ್ ಆವರಣವನ್ನು ಹಳೆಯಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಂದ್ರಕಾ ಪಿ. ಕೋಟ್ಯಾನ್ ಉದ್ಘಾಟಿಸಿದರು. ಸೆಂಟರ್‌ನ ವತಿಯಿಂದ ನಿರ್ಮಿಸಲಾಗಿರುವ ನೂತನ ಕಾಂಕ್ರಿಟ್ ರಸ್ತೆಯನ್ನು ಗ್ರಾಮ ಪಂಚಾಯತ್ ಸದಸ್ಯ ನಾಗರಾಜ ಉದ್ಘಾಟಿಸಿದರು. ಸಾರ್ವಜನಿಕರ ಬಳಕೆಗಾಗಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಮ ಪಂಚಾಯತ್ ಸದಸ್ಯೆ ಕೆರಲ್ ಕುಟಿನ್ಹೊ ಲೋಕಾರ್ಪಣೆ ಗೈದರು. ಸೆಂಟರ್ ನ ಸಾರ್ವಜನಿಕ ಸೇವಾ ಕೇಂದ್ರವನ್ನು ಎಸ್‌ಡಿಪಿಐ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಇರ್ಶಾದ್ ಕದಿಕೆ ನೆರವೇರಿಸಿದರು.
ಈ ಸಂದರ್ಭ ತಖ್ವಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಅಧ್ಯಕ್ಷ ಅಬ್ದುಲ್ ಲತೀಫ್, ಗೌರವಾಧ್ಯಕ್ಷರಾದ ಮುಹಮ್ಮದ್ ಯೂಸುಫ್, ಉಪಾಧ್ಯಕ್ಷ ನೂರುಲ್ ಅಮೀನ್, ಕಾರ್ಯದರ್ಶಿ ನಝೀರ್ ಕಲ್ಲಾಪು, ಸದಸ್ಯರಾದ ಇಫ್ತಿಕಾರ್ ಸಾಗ್, ಶರೀಫ್ ಪಕ್ಷಿಕೆರೆ, ಬಾವುಞಿ ಸಾಗ್, ಅಹಮದ್ ಸಾಗ್, ಮುಹಮ್ಮದ್ ನಾಸರ್ ಸಾಗ್, ರಿಯಾಝ್ ಲೈಟ್ ಹೌಸ್, ಬಿ.ಎಸ್. ಸೂರಿಂಜೆ, ಮುಹಮ್ಮದ್ ಸಾಗ್, ನೂರುದ್ದೀನ್ ಸಾಗ್, ಅಶ್ರಫ್ ಸಾಗ್, ಗುತ್ತಿಗೆದಾರ ಅಸ್ಕಾಫ್ ಪಕ್ಷಿಕೆರೆ ಮೊದಲಾದವರು ಉಪಸ್ಥಿತರಿದ್ದರು.