ಮಂಗಳೂರು ಜೈಲಿನಲ್ಲಿ ಜಾಮರ್ ಅಳವಡಿಕೆಯಿಂದ ಸಮಸ್ಯೆ: ಗ್ರಾಹಕರ ಆಕ್ರೋಶ

ಮಂಗಳೂರು, ಫೆ.21: ನಗರದ ಕೇಂದ್ರ ಕಾರಾಗೃಹದಲ್ಲಿ ಜಾಮರ್ ಅಳವಡಿಕೆಯ ತಾಂತ್ರಿಕ ಪ್ರಕ್ರಿಯೆ ಪ್ರಾಯೋಗಿಕವಾಗಿ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ನಗರದ ಸುತ್ತಮುತ್ತ ಶುಕ್ರವಾರ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ತಲೆದೋರಿತು. ಬೆಳಗ್ಗಿನಿಂದಲೇ ನಗರದ ಪಿವಿಎಸ್, ಬಂಟ್ಸ್‌ಹಾಸ್ಟೆಲ್, ನಂತೂರು, ಲೇಡಿಹಿಲ್ ಮತ್ತಿತರ ಕಡೆಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದೆ ಗ್ರಾಹಕರು ಪರದಾಡುವಂತಾಯಿತು.
ಎಲ್ಲಾ ಮೊಬೈಲ್ ಕಂಪನಿಗಳ ನೆಟ್‌ವರ್ಕ್ ಸಿಗದ ಕಾರಣ ತಾಂತ್ರಿಕ ಸಮಸ್ಯೆ ಎಂದು ಭಾವಿಸಲಾಗಿತ್ತು. ಬಳಿಕ ಜೈಲಿನಲ್ಲಿ ಜಾಮರ್ ಅಳವಡಿಕೆಯ ಪ್ರಕ್ರಿಯೆ ನಡೆಯುತ್ತಿರುವುದು ಈ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.
ಜೈಲಿನೊಳಗೆ ಹಾಳಾದ ಜಾಮರ್ ದುರಸ್ತಿಪಡಿಸಲಾಗಿದೆ. ಅದರ ಪ್ರಾಯೋಗಿಕ ನಿರ್ವಹಣೆ ನಡೆಸಲಾಗುತ್ತಿದೆ. ನೆಟ್‌ವರ್ಕ್ ಸಮಸ್ಯೆಗೆ ಜಾಮರ್ ಕಾರಣ ಅಲ್ಲವೆಂದು ಜೈಲಿನ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
Next Story





