ಕ್ರೀಡಾಕೂಟಗಳು ಸಂಪರ್ಕ ಸೇತುವೆಯಾಗಿ ಹೊರಹೊಮ್ಮಲಿ: ಗೋಪಾಲಕೃಷ್ಣ ತಂತ್ರಿ

ಮಂಗಳೂರು: ಜೀವನದ ಅನುಕೂಲಕ್ಕಾಗಿ, ವಿದ್ಯಾಭ್ಯಾಸ, ಕೆಲಸದಲ್ಲಿ ತೊಡಗುವ ಸುಬ್ರಹ್ಮಣ್ಯ ಸದನದಲ್ಲಿ ನೆಲೆಸಿರುವ ಎಲ್ಲಾ ಸದಸ್ಯರಿಗೂ ಕ್ರೀಡಾಕೂಟಗಳು ಹಾಗೂ ಇಲ್ಲಿ ಜರಗುವ ಕಾರ್ಯಕ್ರಮಗಳು ಸಂಪರ್ಕ ಸೇತುವಾಗಿ ಬೆಳೆಸಲಿದೆ ಎಂದು ಮುನ್ನೂರು ಶ್ರೀ ಗೋಪಾಲಕೃಷ್ಣ ತಂತ್ರಿ ಅಭಿಪ್ರಾಯಪಟ್ಟಿದ್ದಾರೆ.
ಅವರು ನಗರದ ಪದುವಾ ಕ್ರೀಡಾಂಗಣದಲ್ಲಿ ಜರಗಿದ ಎರಡನೇ ವರ್ಷದ ಸುಬ್ರಹ್ಮಣ್ಯ ಸದನ ಪ್ರೀಮಿಯರ್ ಲೀಗ್ ಪಂದ್ಯಾಟ ವನ್ನು ಉದ್ಘಾಟಿಸಿ ಮಾತನಾಡಿದರು.
ಸುಪ್ರೀಮ್ ಮೋಟರ್ಸ್ ಸೀನಿಯರ್ ಮೆನೇಜರ್ ಪ್ರಭಾಕರ್ ರಾವ್, ವಕೀಲರಾದ ಪ್ರವೀಣ್ ಅದ್ಯಪಾಡಿ, ನಂದಳಿಕೆ ಪೋಸ್ಟ್ ಮಾಸ್ಟರ್ ಮನೋಜ್ ರಾವ್ ನಂದಳಿಕೆ, ಕರ್ಣಾಟಕ ಬ್ಯಾಂಕ್ ಪ್ರಬಂಧಕ ಉಲ್ಲಾಸ್ ಬಿ.ಎಸ್ ಕೆಡೆಂಜಿ, ಸುಬ್ರಹ್ಮಣ್ಯ ಸಭಾ ಹಾಸ್ಟೆಲ್ ಮಣೈ ಪ್ರಬಂಧಕ ಶಿವಾಜಿ ರಾವ್ ಮುಖ್ಯ ಅತಿಥಿಗಳಾಗಿದ್ದರು. ಪಂದ್ಯಾಕೂಟದಲ್ಲಿ ಒಟ್ಟು 7 ತಂಡಗಳು ಭಾಗವಹಿಸಿತ್ತು. ಅವಿನಾಶ್ ಮರ್ಧಂಬೈಲ್, ನಾಗರಾಜ್ ವಿಟ್ಲ ನಿರೂಪಿಸಿದರು. ಸತ್ಯ ಕುಮಾರ್ ಸರಳಿ ವಂದಿಸಿದರು.
Next Story