ಮಂಗಳೂರು | ನಡುಪಳ್ಳಿಯಲ್ಲಿ ರಕ್ತದಾನ ಶಿಬಿರ

ಮಂಗಳೂರು: ನಡುಪಳ್ಳಿ ಜುಮಾ ಮಸೀದಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಕುದ್ರೋಳಿ ಶಾಖೆಯ ಜಂಟಿ ಆಶ್ರಯದಲ್ಲಿ ನಡುಪಳ್ಳಿ ಮಸೀದಿ ವಠಾರದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಸಭಾ ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ ಉದ್ಘಾಟಿಸಿದರು. ನಡುಪಳ್ಳಿ ಜುಮಾ ಮಸೀದಿಯ ಉಪಾಧ್ಯಕ್ಷ ಹಾಜಿ ಇಸ್ಮಾಯೀಲ್ ಡಿಲಕ್ಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್ಕೆಎಸ್ಸೆಸ್ಸೆಫ್ ಕುದ್ರೋಳಿ ಶಾಖೆಯ ಅಧ್ಯಕ್ಷ ಎನ್.ಕೆ.ಅಬೂಬಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಂಡತ್ ಪಲ್ಲಿ ಜುಮಾ ಮಸೀದಿಯ ಖತೀಬ್ ರಫೀಕ್ ಮದನಿ ಮುಖ್ಯ ಭಾಷಣ ಮಾಡಿದರು. ವೇದಿಕೆಯಲ್ಲಿ ಕಾರ್ಪೊರೇಟರ್ ಹಾಜಿ ಶಂಸುದ್ದಿನ್ ಎಚ್.ಬಿ.ಟಿ., ನಡುಪಳ್ಳಿ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಬಿ.ಅಬೂಬಕರ್, ಮಾಜಿ ಮೇಯರ್ ಕೆ.ಅಶ್ರಫ್, ಅನ್ವರ್ ಹುಸೇನ್, ಅಲಿ ಫೈಝಿ, ಸಿರಾಜ್ ಫೈಝಿ, ಕೆ.ಮುಸ್ತಾಕ್ ಜಲೀಲ್ ಎಚ್.ಎಸ್., ರಿಯಾಝ್ ಬೆಂಗ್ರೆ, ಅಝರ್, ಅಫ್ಸರ್ ಬಾಷ, ಇಸ್ಮಾಯೀಲ್ ಬಿ.ಎ, ಮುಹಮ್ಮದ್ ಫರಾಝ್, ತೌಸೀಫ್, ಅಸ್ಲಮ್, ಸಿರಾಜ್, ಎನ್.ಕೆ. ಆಸೀಫ್, ಅಝೀಮ್ ಹಾಗೂ ಇನ್ನಿತರ ಉಲಮಾ ಉಮಾರಾಗಳು ಭಾಗವಹಿಸಿದ್ದರು.
ನಡುಪಳ್ಳಿ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಸ್ವಾಗತಿಸಿದರು. ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಸಿರಾಜ್ ವಂದಿಸಿದರು.
ಕಾರ್ಯಕ್ರಮದಲ್ಲಿ 252 ಮಂದಿ ರಕ್ತದಾನ ಮಾಡಿದರು.





