ಉಳ್ಳಾಲ ದರ್ಗಾ ಉರೂಸ್: ಬೆಂಗಳೂರಿನಲ್ಲಿ ಸ್ಪೀಕರ್ ಕಚೇರಿಯಲ್ಲಿ ಸಭೆ

ಬೆಂಗಳೂರು: ಎಪ್ರಿಲ್ 24ರಿಂದ ಮೇ 18ರವರೆಗೆ ನಡೆಯಲಿರುವ ಉಳ್ಳಾಲ ಸೈಯದ್ ಮದನಿ ದರ್ಗಾದ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಸರಕಾರದ ಅನುದಾನ ಬಿಡುಗಡೆಗೊಳಿಸುವ ವಿಚಾರವಾಗಿ ವಿಧಾನಸೌಧ ಸ್ಪೀಕರ್ ಹಾಗೂ ಮಂಗಳೂರು ಶಾಸಕರೂ ಆಗಿರುವ ಯು.ಟಿ.ಖಾದರ್ ಅವರು ಬೆಂಗಳೂರಿನ ತನ್ನ ಕಚೇರಿಯಲ್ಲಿ ದರ್ಗಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆ ನಡೆಸಿದರು.
ರಾಜ್ಯ ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಝಮೀರ್ ಅಹ್ಮದ್ ಖಾನ್ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇವೇಳೆ ಉರೂಸ್ ಗೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಅರ್ಪಿಸಲಾಯಿತು.
Next Story