ವಾಹನ ಢಿಕ್ಕಿ: ಬಳ್ಳಾರಿ ಮೂಲದ ವ್ಯಕ್ತಿ ಮೃತ್ಯು

ಮಂಗಳೂರು: ನಗರದ ಕೆಎಸ್‌ಆರ್‌ಟಿಸಿ ಜಂಕ್ಷನ್ ಬಳಿ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಬಳ್ಳಾರಿಯ ಮಲ್ಲರೆಡ್ಡಿ (46) ಮೃತಪಟ್ಟ ವ್ಯಕ್ತಿ. ಇವರು ಶನಿವಾರ ರಾತ್ರಿ ೭:೪೫ಕ್ಕೆ ತನ್ನ ಪತ್ನಿಯೊಂದಿಗೆ ಕೆಎಸ್‌ಆರ್‌ಟಿಸಿ ಜಂಕ್ಷನ್ ಕಡೆಯಿಂದ ಲಾಲ್‌ಭಾಗ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ತಕ್ಷಣ ಮಲ್ಲರೆಡ್ಡಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ಕರೆದೊಯ್ದಿದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಆರೋಪಿ ವಾಹನ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಸಂಚಾರ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story