ಕಾರಾಗೃಹದೊಳಕ್ಕೆ ಪೊಟ್ಟಣ ಎಸೆದ ಪ್ರಕರಣ: ಆರೋಪಿಗಳ ಪತ್ತೆಗೆ ಪೊಲೀಸರಿಂದ ಶೋಧ

ಸಾಂದರ್ಭಿಕ ಚಿತ್ರ
ಮಂಗಳೂರು: ಮಂಗಳೂರಿನ ಕಾರಾಗೃಹದೊಳಗೆ ರಸ್ತೆಯಿಂದ ಪೊಟ್ಟಣ ಎಸೆದ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಆದರೆ ಪೊಟ್ಟಣ ಎಸೆದ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಆರೋಪಿಗಳ ಕೃತ್ಯದ ವೀಡಿಯೋ ಲಭ್ಯವಾಗಿದ್ದರೂ ಅವರು ಬಂದಿದ್ದ ದ್ವಿಚಕ್ರ ವಾಹನದಲ್ಲಿ ನಂಬರ್ಪ್ಲೇಟ್ ಇರಲಿಲ್ಲ. ಹಾಗಾಗಿ ಪೊಲೀಸರಿಗೆ ಆರೋಪಿಗಳ ಪತ್ತೆ ಸವಾಲಾಗಿ ಪರಿಣಮಿಸಿದೆ.
ರವಿವಾರದಂದು ಇಬ್ಬರು ಯುವಕರು ಸ್ಕೂಟರ್ನಲ್ಲಿ ಬಂದು ರಸ್ತೆಯಿಂದ ಕಾರಾಗೃಹದೊಳಗೆ ಪೊಟ್ಟಣವನ್ನು ಎಸೆದು ಪರಾರಿಯಾಗಿದ್ದರು. ಪೊಟ್ಟಣದಲ್ಲಿ ಡ್ರಗ್ಸ್ ಇರಬೇಕೆಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಪೊಟ್ಟಣದಲ್ಲಿ ಸಿಗರೆಟ್, ಮೊಬೈಲ್, ಚಹಾಪುಡಿ ಇತ್ತು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದರು.
ಭದ್ರತೆ ಹೆಚ್ಚಳ:ಪೊಟ್ಟಣ ಎಸೆದ ಘಟನೆಯ ಹಿನ್ನೆಲೆಯಲ್ಲಿ ಕಾರಾಗೃಹದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಖ್ಯವಾಗಿ ಪೊಟ್ಟಣ ಎಸೆದ ಪರಿಸರದಲ್ಲಿ ದಿನದ 24 ಗಂಟೆಯೂ ಹೆಚ್ಚುವರಿ ಪೊಲೀಸ್ ಅಧಿಕಾರಿ, ಸಿಬಂದಿಯನ್ನು ನಿಯೋಜಿಸಿ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ





