Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮೂರನೇ ತರಗತಿ ತನಕ ಕಲಿತಿದ್ದರೂ...

ಮೂರನೇ ತರಗತಿ ತನಕ ಕಲಿತಿದ್ದರೂ ವ್ಯವಹಾರಕ್ಕೆ ಭಾಷೆ ಅಡ್ಡಿಯಾಗಲಿಲ್ಲ: ಡಾ.ಯು.ಕೆ. ಮೋನು ಕಣಚೂರು

ಮಂಗಳೂರು ಪ್ರೆಸ್ ಕ್ಲಬ್ ತಿಂಗಳ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮನದಾಳದ ಮಾತು

ವಾರ್ತಾಭಾರತಿವಾರ್ತಾಭಾರತಿ26 Feb 2025 8:01 PM IST
share
ಮೂರನೇ ತರಗತಿ ತನಕ ಕಲಿತಿದ್ದರೂ ವ್ಯವಹಾರಕ್ಕೆ ಭಾಷೆ ಅಡ್ಡಿಯಾಗಲಿಲ್ಲ: ಡಾ.ಯು.ಕೆ. ಮೋನು ಕಣಚೂರು

ಮಂಗಳೂರು, ಫೆ.26: ಮೂರನೇ ತರಗತಿವರೆಗೆ ಶಾಲಾ ಶಿಕ್ಷಣ ಪಡೆದಿದ್ದರೂ, ಸ್ಥಳೀಯ ಭಾಷೆಗಳ ಜತೆಗೆ ಇಂಗ್ಲಿಷ್, ಹಿಂದಿ, ತಮಿಳು, ಗುಜರಾತಿ ಭಾಷೆಯಲ್ಲಿ ಚೆನ್ನಾಗಿ ಮಾತನಾಡುತ್ತೇನೆ. ನನಗೆ ಎಂದಿಗೂ ಭಾಷೆ ವ್ಯವಹಾರಕ್ಕೆ ತೊಡಕು ಆಗಿಲ್ಲ ಎಂದು ಉದ್ಯಮಿ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಯು.ಕೆ.ಮೋನು ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ತಿಂಗಳ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು ನನಗೆ ಪರಮಾಪ್ತ ಸ್ನೇಹಿತರು ಸಮಾಜದಲ್ಲಿ ಯಾರು ಇಲ್ಲ. ಬದುಕಿಗೆ ಅನುಭವ ಪಡೆಯಲು ಕೂಲಿ ಕೆಲಸ ಮಾಡಿದ್ದೇನೆ, ಮಣ್ಣು ಹೊತ್ತಿದ್ದೇನೆ, ಮೀನು ಹೊತ್ತಿದ್ದೇನೆ , ಇದ್ದಿಲು ತಯಾರಿಕೆ ಕೆಲಸ ಮಾಡಿದ್ದೇನೆ. ಹನ್ನೆರಡನೆ ವಯಸ್ಸಿನಲ್ಲಿ ತಂದೆ ಇದ್ದ ಕಂಪೆನಿಯಲ್ಲಿ ಕಾರ್ಮಿಕನಾಗಿ ಕಾಫಿ ಮೂಟೆ ಹೊರುವ ಕೆಲಸ ಮಾಡಿದ್ದೇನೆ. ಇವೆಲ್ಲವನ್ನು ಮನೆಯಲ್ಲಿ ಕಷ್ಟ ಇದೆ ಎಂಬ ಕಾರಣಕ್ಕಾಗಿ ಮಾಡಿಲ್ಲ ಎಂದರು.

ನನ್ನ ತಂದೆ ಬ್ರಿಟಿಷ್ ಸರಕಾರದಲ್ಲಿ ನೌಕರ ಆಗಿದ್ದರು. ಆ ಕಾಲಕ್ಕೆ ಸ್ವಂತ ಮನೆಯೂ ಇರಲಿಲ್ಲ. ತಂದೆಯ ಮನೆಯಲ್ಲಿ ಬಡತನವಿತ್ತು. ತಾಯಿಯ ಮನೆಯವರು ಶ್ರೀಮಂತರು. ದುಡ್ಡು ನೀಡಿದರೂ ಅಕ್ಕಿ ಸಿಗದ ಕಾಲದಲ್ಲಿ ನಾವು ಜೀವನ ನಡೆಸಿದ್ದೆವು. ವ್ಯವಹಾರದಲ್ಲಿ ಹಂತ ಹಂತವಾಗಿ ಬೆಳೆದು ಇಂದು ಶಿಕ್ಷಣ ಸಂಸ್ಥೆಗಳು, ಮೆಡಿಕಲ್ ಕಾಲೇಜು ಸ್ಥಾಪಿಸುವಂತಾಯಿತು ಎಂದರು.

ಜೀವನದಲ್ಲಿ ಯಾರೂ ಕೂಡಾ ನಾವು ಅಂದುಕೊಂಡದ್ದನ್ನು ಸಾಧಿಸಬಹುದು. ವ್ಯವಹಾರದಲ್ಲಿ ಹಣ ಮಾಡಬೇಕು, ಶ್ರೀಮಂತನಾಗಬೇಕು ಎಂಬ ಬಯಕೆ ನನ್ನಲ್ಲಿ ಇರಲಿಲ್ಲ. ಮನಸ್ಸಿನಲ್ಲಿ ಇಚ್ಛೆ, ನಡೆ ನುಡಿ ಚೆನ್ನಾಗಿದ್ದರೆ ಜೀವನದಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಬಹುದು. ಅದಕ್ಕೆ ನನ್ನ ಜೀವನವೇ ಸಾಕ್ಷಿ. ಅಡಿಕೆ ಹೆಕ್ಕಲು ಹೋದರೆ ಎರಡು ಆಣೆ ಸಂಬಳ ನೀಡುತ್ತಿದ್ದರು. ಇದಕ್ಕಾಗಿ ಶಾಲೆಗೆ ಚಕ್ಕರ್ ಹಾಕಿ ಅಡಿಕೆ ಹೆಕ್ಕಲು ಹೋಗುತ್ತಿದ್ದೆ ಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

1972ರಲ್ಲಿ ಟಿಂಬರ್ ಕಂಪೆನಿ ಸ್ಥಾಪಿಸಿದೆ. ಅದಕ್ಕೂ ಎರಡು ವರ್ಷಗಳ ಮೊದಲು ಕಂಪೆನಿ ಸ್ಥಾಪಿಸಲು ನನಗೆ ಅನುಮತಿ ನಿರಾಕರಿಸಿದ್ದರು. 2000ನೇ ಇಸವಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಎರಡನೇ ದೊಡ್ಡ ಕಂಪೆನಿ ಎಂಬ ಅವಾರ್ಡ್ ನಮ್ಮ ಕಂಪೆನಿಗೆ ಲಭಿಸಿತ್ತು. ಬರ್ಮಾ, ದುಬೈ, ಇಂಡೋನೇಷ್ಯಾ, ಮಲೇಷ್ಯಾ ಸಹಿತ ಹಲವು ದೇಶಗಳಲ್ಲಿ ಕಂಪೆನಿಯ ವ್ಯವಹಾರ ನಡೆಯುತ್ತಿದೆ ಎಂದರು.


ಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ವೇಳೆ ಎದುರಿಸಬೇಕಾದ ಸವಾಲುಗಳನ್ನು ಅರ್ಥಮಾಡಿಕೊಂಡಿದ್ದೇನೆ. ಉತ್ತಮ ಶಿಕ್ಷಣ ಸಿಗಲು ಇರುವ ಹಲವು ತೊಡಕುಗಳನ್ನು ಸ್ವತಃ ಕಂಡಿದ್ದೇನೆ. ನೋವುಗಳನ್ನು ಅನುಭವಿಸಿದ್ದೇನೆ. ಇದೇ ನೋವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಕಾರಣವಾಯಿತು. ನನ್ನ ಹುಟ್ಟೂರಿನಲ್ಲಿ ಎರಡು ಮೆಡಿಕಲ್ ಕಾಲೇಜುಗಳಿವೆ. ಊರಿನ ಹೊರಗಿನವರು ಅದನ್ನು ಸ್ಥಾಪಿಸಿದ್ದಾರೆ. ಹುಟ್ಟೂರಿನಲ್ಲಿ ನಾನೂ ಮೆಡಿಕಲ್ ಕಾಲೇಜು ತೆರೆಯಬೇಕು ಎಂಬ ಕನಸಿತ್ತು. ವೈದ್ಯರಾದ ಮಗಳು ಹಾಗೂ ವೈದ್ಯ ಅಳಿಯನ ಸಹಕಾರದಿಂದ ಮೆಡಿಕಲ್ ಕಾಲೇಜು ಕನಸು ಸಾಕಾರಗೊಂಡಿದೆ ಎಂದರು.

ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಬಡ, ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಅಥವಾ ರಿಯಾಯಿತಿ ಶುಲ್ಕದಲ್ಲಿ ಶಿಕ್ಷಣ ನೀಡಲು ಬದ್ಧ. ಮುಂದೆ ಡೆಂಟಲ್ ಕಾಲೇಜು , ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಯು.ಕೆ. ಮೋನು ತಿಳಿಸಿದರು.

ಗೌತಮ್ ಅದಾನಿ ಮತ್ತು ನಾನು ಒಂದೇ ಸಂದರ್ಭದಲ್ಲಿ ವ್ಯವಹಾರದ ಬಗ್ಗೆ ಮಾತನಾಡಲು ಉದ್ಯಮಿಯೊಬ್ಬರ ಬಳಿಗೆ ತೆರಳಿದ್ದೆವು. ಅದಾನಿ ಇಂದು ದೊಡ್ಡ ಉದ್ಯಮಿಯಾಗಿದ್ದಾರೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಹಿಲರಿ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ.ಆರ್., ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು. ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X