ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ರಂಝಾನ್ ಸ್ವಾಗತ ಕಾರ್ಯಕ್ರಮ

ಮಂಗಳೂರು, ಫೆ.27: ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ರಂಝಾನ್ ಸ್ವಾಗತ ಕಾರ್ಯಕ್ರಮ ನಡೆಯಿತು.
ಜಮಾತೆ ಇಸ್ಲಾಮಿ ಮಂಗಳೂರು ಶಾಖೆಯ ಅಧ್ಯಕ್ಷ, ಸಿಎ ಇಸ್ಹಾಕ್ ಪುತ್ತೂರು ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರವಚನ ನೀಡಿದರು. ರಂಝಾನ್ ತಿಂಗಳಲ್ಲಿ ಓರ್ವ ವ್ಯಕ್ತಿ ಯ ಸಂಪೂರ್ಣ ತರಬೇತಿ ಮತ್ತು ಸಂಸ್ಕರಣೆ ಹೇಗೆ ಸಾಧ್ಯ? ಎಂಬುದನ್ನು ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಅನುಗ್ರಹ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯಾಸೀನ್ ಬೇಗ್ ಅಧ್ಯಕ್ಷತೆ ವಹಿಸಿದ್ದರು. ಖಜಾಂಜಿ ಹೈದರ್ ಅಲಿ, ಜೊತೆ ಕಾರ್ಯದರ್ಶಿ ಅಬ್ದುಲ್ಲಾ ಕುಂಞಿ ಪ್ರಾಂಶುಪಾಲೆ ಡಾ. ಹೇಮಲತಾ ಬಿ. ಡಿ. ವೇದಿಕೆಯಲ್ಲಿದ್ದರು.
ಮೌಲ್ಯ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿನಿಗಳು ಹಾಗೂ ಉಪನ್ಯಾಸಕಿಯರು ಭಾಗವಹಿಸಿದ್ದರು.
Next Story





