ಸುಳ್ಯ ನಗರದಲ್ಲಿ ಗಾಂಜಾ ಸಾಗಾಟ ಪ್ರಕರಣ: ಆರೋಪಿ ಸೆರೆ

ಸುಳ್ಯ: ನಗರದ ಕುರುಂಜಿಭಾಗ್ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ನಡೆದಿದೆ.
ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿಪಿ ರವರು, ಖಚಿತ ಮಾಹಿತಿಯ ಮೇರೆಗೆ ಸುಳ್ಯದ ಕುರುಂಜಿಭಾಗ್ ಎಂಬಲ್ಲಿ ದಾಳಿ ಮಾಡಿ, ಅರಂತೋಡು ಗ್ರಾಮದ ತುಷಾರ್ ಬಿ ಕೆ (22) ಎಂಬಾತನನ್ನು ಬಂಧಿಸಿದ್ದಾರೆ. ಆತನ ಬಳಿಯಿದ್ದ ಸುಮಾರು 510ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆದು ಕೇಸು ದಾಖಲಿಸಲಾಗಿದೆ.
Next Story





