ವಿದ್ಯಾರ್ಥಿನಿ ಆತ್ಮಹತ್ಯೆ

ಸುಳ್ಯ: ವಿದ್ಯಾರ್ಥಿನಿಯೋರ್ವಳು ಕಾಲೇಜಿನ ವಸತಿ ನಿಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ.
ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನ ಬಿ.ಡಿ.ಎಸ್. ವಿದ್ಯಾರ್ಥಿನಿ ಬೆಳಗಾವಿ ಮೂಲದ ಕೃತಿಕಾ ನಿಡೋಣಿ (21) ಮೃತರು. ಕೃತಿಕಾ ಬುಧವಾರ ರಾತ್ರಿ 7.10ರಿಂದ 7.30ರ ಅವಧಿಯಲ್ಲಿ ವಸತಿ ನಿಲಯದ ತನ್ನ ಕೊಠಡಿಯಲ್ಲಿ ನೇಣು ಬಿಗಿದು ನೇತಾಡಿಕೊಂಡಿದ್ದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಯಾರಿಗೋ ಫೋನ್ ಮಾಡಿ ತಾನು ಸಾಯುತ್ತೇನೆ ಎಂದು ಕೃತಿಕಾ ಸಾಯುವ ಮೊದಲು ಹೇಳುತ್ತಿದ್ದಳು ಎನ್ನಲಾಗಿದ್ದು, ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುಳ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





