ಫರ್ನಿಚರ್ ಮಾರಾಟದ ನೆಪದಲ್ಲಿ ವಂಚನೆ: ಪ್ರಕರಣ ದಾಖಲು

ಮಂಗಳೂರು, ಫೆ.28: ಸಿಆರ್‌ಪಿಎಫ್ ಯೋಧನ ಹೆಸರಿನಲ್ಲಿ ಕರೆ ಮಾಡಿ ಫರ್ನಿಚರ್ ಮಾರಾಟಕ್ಕಿದೆ ಎನ್ನುತ್ತಾ 1,47,500 ರೂ. ವಂಚನೆ ಮಾಡಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.18ರಂದು ರಾತ್ರಿ ಸಂತೋಷ್ ಕುಮಾರ್ ಎನ್ನುವ ಹೆಸರಿನಲ್ಲಿ ಆರೋಪಿ ಕರೆ ಮಾಡಿ ತನಗೆ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಯಾಗಿದೆ. ಮನೆಯಲ್ಲಿ ಫರ್ನಿಚರ್‌ಗಳಿದ್ದು, ಅದನ್ನು ಸೇಲ್ ಮಾಡುವುದಾಗಿ ತಿಳಿಸಿದ್ದ. ಆ ಮಾತನ್ನು ನಂಬಿದ ತಾನು ಆತ ನೀಡಿದ ವಿವಿಧ ಮೊಬೈಲ್ ಸಂಖ್ಯೆಗಳಿಗೆ ಹಂತ ಹಂತವಾಗಿ 1,47,500 ರೂ. ಪಾವತಿಸಿದ್ದೆ. ಫೆ.20ರಂದು ಮುಖೇಶ್ ಎಂಬಾತ ಕರೆ ಮಾಡಿ ಅಕೌಂಟ್ ಸ್ಟೇಟ್‌ಮೆಂಟ್ ಕೇಳಿದ್ದು, ಬಳಿಕ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಫರ್ನಿಚರ್ ಸೇಲ್ ಹೆಸರಿನಲ್ಲಿ ಮೋಸ ಹೋದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
Next Story





