ಡಿ ಗ್ರೂಫ್ ವಿಟ್ಲ: ನೂತನ ಪದಾಧಿಕಾರಿಗಳ ಅಯ್ಕೆ

ವಿಟ್ಲ: ಡಿ ಗ್ರೂಫ್ ವಿಟ್ಲ ಇದರ 2025-26 ರ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ವಿಟ್ಲದ ಸ್ಪೈಸಿ ಹೊಟೇಲ್ ನಲ್ಲಿ ನಡೆದ ಮಹಾಸಭೆಯಲ್ಲಿ ಗೌರವಾಧ್ಯಕ್ಷ ಅಝೀನ ಸನ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವಾಧ್ಯಕ್ಷರಾಗಿ ಝುಬೈರ್ ಮಾಸ್ಟರ್ ವಿಟ್ಲ, ಅಧ್ಯಕ್ಷರಾಗಿ ಶಾಕೀರ್ ಅಳಕೆಮಜಲು, ಉಪಾಧ್ಯಕ್ಷರಾಗಿ ನೌಶೀನ್ ಬದ್ರಿಯಾ, ಪ್ರಧಾನ ಕಾರ್ಯದರ್ಶಿಯಾಗಿ ರಾಝೀಕ್ ಒಕ್ಕೆತ್ತೂರು, ಜೊತೆ ಕಾರ್ಯದರ್ಶಿಯಾಗಿ ಇರ್ಷಾದ್ ಸೆಲೆಕ್ಟ್, ಕೋಶಾಧಿಕಾರಿಯಾಗಿ ಬಶೀರ್ ಬೊಬ್ಬೆಕ್ಕೇರಿ, ಮಾಧ್ಯಮ ವಕ್ತಾರರಾಗಿ ಮಹಮ್ಮದ್ ಆಲಿ ವಿಟ್ಲ ಅವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ ಅಝೀಜ್ ಸನ, ಕಲಂದರ್ ಪರ್ತಿಪ್ಪಾಡಿ, ಇಕ್ಬಾಲ್ ಶೀತಲ್, ರಫೀಕ್ ಪೊನ್ನೋಟ್ಟು, ಇಸಾಕ್ ವಿಟ್ಲ ಅವರನ್ನು ನೇಮಕ ಮಾಡಲಾಯಿತು. ಸಾಮಾಜಿಕ ಜಾಲತಾಣದ ಉಸ್ತುವಾರಿಗಳಾಗಿ ಶಿಯಾಬ್ ತೈಬ, ರಾಝೀಕ್ ಅವರನ್ನು ಆಯ್ಕೆ ಮಾಡಲಾಯಿತು.
ಡಿ’ ಗ್ರೂಪ್(ರಿ) ವಿಟ್ಲ ಇದರ 2025-26ನೇ ಸಾಲಿನ ಆಂಬ್ಯುಲೆನ್ಸ್ ನಿರ್ವಹಣಾ ಸಮಿತಿ ರಚಿಸಲಾಯಿತು. ಹಂಝ ವಿಟ್ಲ, ರಿಝಾಝ್ ವಿ.ಹೆಚ್, ಅಬ್ದುಲ್ ಸಮದ್ ಏರ್ ಸೌಂಡ್ಸ್ , ಹಂಝ ವಿ.ಕೆ.ಎಮ್, ಸಪ್ವಾನ್ ಕರ್ನಾಟಕ ಅವರನ್ನು ನೇಮಕ ಮಾಡಲಾಯಿತು.
ಇದೇ ಸಂದರ್ಭ ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿಯಾಗಿ ಶಾಕೀರ್ ಅಳಕೆ ಮಜಲು ಹಾಗೂ ವಿಟ್ಲ ಉಪ್ಪಿನಂಗಡಿ ಯೂತ್ ಕಾಂಗ್ರಸ್ ಅಧ್ಯಕ್ಷರಾಗಿ ಆಯ್ಕೆ ಅಬ್ದುಲ್ ಸಮದ್ ಅವರನ್ನು ಸನ್ಮಾನಿಸಲಾಯಿತು.







