ಉಳ್ಳಾಲ: ರಂಝಾನ್ ಕಿಟ್ ವಿತರಣೆ

ಉಳ್ಳಾಲ: ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಳೇಕಲ ಇದರ ಆಶ್ರಯದಲ್ಲಿ ರಂಜಾನ್ ಕಿಟ್ ವಿತರಣೆ ಕಾರ್ಯಕ್ರಮ ಅಳೇಕಲ ದಲ್ಲಿರುವ ಟ್ರಸ್ಟ್ ನ ಕಚೇರಿಯಲ್ಲಿ ನಡೆಯಿತು.
ಟ್ರಸ್ಟ್ ನ ಅಧ್ಯಕ್ಷ ತ್ವಾಹ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಳೆಕೋಟೆ ಜುಮಾ ಮಸೀದಿ ಖತೀಬ್ ಸಿರಾಜುದ್ದೀನ್ ಹಿಮಮಿ ದುಆ ನೆರವೇರಿಸಿದರು.
ನಗರಸಭೆ ಸದಸ್ಯ ಇಸ್ಮಾಯಿಲ್ ಕಾರ್ಯಕ್ರಮ ಉದ್ಘಾಟಿಸಿ ಕಿಟ್ ವಿತರಣೆಯ ಮಹತ್ವ ವಿವರಿಸಿದರು. ಈ ಸಂದರ್ಭ 400 ಅರ್ಹ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಯು.ಎಸ್ . ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಎ.ಎನ್ ಮೊಹಮ್ಮದ್ ಕಾರ್ಯದರ್ಶಿ ಹಮೀದ್ ಸದಸ್ಯ ಯು. ಎಚ್ ಸಿದ್ದೀಕ್, ರಹ್ಮತುಲ್ಲಾಹ್, ಅಶ್ರಫ್, ಕೆಎಂಕೆ ಮಂಜನಾಡಿ ಮತ್ತಿತರರು ಉಪಸ್ಥಿತರಿದ್ದರು.
Next Story