ಬೆಂಗ್ರೆ ಕಸಬ: ಗ್ಯಾರಂಟಿ ಯೋಜನೆ ವಿಲೇವಾರಿ ಶಿಬಿರ

ಮಂಗಳೂರು, ಮಾ.2: ಗ್ಯಾರಂಟಿ ಯೋಜನೆಯನ್ನು ಜನರಿಗೆ ತಲುಪಿಸುವುದಕ್ಕಾಗಿ ಬೆಂಗ್ರೆ ಕಸಬಾದಲ್ಲಿ ಏರ್ಪಡಿಸಲಾದ ಪಂಚ ಗ್ಯಾರಂಟಿ ಯೋಜನೆಯಗಳ ವಿಲೇವಾರಿ ಶಿಬಿರವನ್ನು ಶಾಸಕ ಐವನ್ ಡಿಸೋಜ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಗ್ಯಾರಂಟಿ ಯೋಜನೆಗಳು ಬಹಳಷ್ಟು ಜನರಿಗೆ ತಮ್ಮ ಜೀವನದಲ್ಲಿ ನೆಮ್ಮದಿಯನ್ನು ತಂದು ಕೊಟ್ಟಿದೆ. ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ 200 ಕೋ.ರೂ.ಗಿಂತಲೂ ಹೆಚ್ಚು ಮೊತ್ತವನ್ನು ವಿನಿಯೋಗಿಸುವ ಮೂಲಕ ಜಿಲ್ಲೆಯಲ್ಲಿ ಸುಮಾರು 2,000 ಕೋ.ರೂ.ಗೂ ಅಧಿಕ ಮೊತ್ತವನ್ನು ವ್ಯಯಿಸಿದೆ ಎಂದರು.
ಈ ಯೋಜನೆಯ ಪ್ರಯೋಜನ ಸಿಗದವರಿಗೆ ಇಂತಹ ಗ್ಯಾರಂಟಿ ಶಿಬಿರದ ಮೂಲಕ ಅವರ ದಾಖಲೆಗಳನ್ನು ಸರಿಪಡಿಸಿ ಪ್ರಯೋಜನ ಸಿಗುವಂತೆ ಮಾಡಲಾಗುತ್ತದೆ ಎಂದು ಐವನ್ ಡಿಸೋಜ ಹೇಳಿದರು.
ಶಿಬಿರದಲ್ಲಿ ಗ್ಯಾರಂಟಿ ಸಮಿತಿಯ ಸದಸ್ಯರಾದ ಅಶ್ರಫ್ ಬೆಂಗ್ರೆ, ಕ್ರಿಸ್ಟನ್‌ಮೇನೆಜಸ್, ನೀತು, ವಿದ್ಯಾ ಉಪಸ್ಥಿತರಿದ್ದರು.
Next Story





