ಮಹಿಳಾ ಸಫಾಯಿ ಕರ್ಮಚಾರಿಗಳ ದುಸ್ತರ ಬದುಕು: ವಿಶ್ವಸಂಸ್ಥೆಯ ಗಮನ ಸೆಳೆದ ಡಾ. ಪ್ರೀತಿ ಎಲ್.ಎನ್

ಮಂಗಳೂರು, ಮಾ.2:ಭಾರತದ ಅತ್ಯಂತ ಶೋಷಿತ ಜನವರ್ಗವಾಗಿರುವ ಮಹಿಳಾ ಸಫಾಯ್ ಕರ್ಮಚಾರಿಗಳ ಅಘಾತ ಕಾರಿ ಹಾಗೂ ದುರಂತಮಯ ಬದುಕಿನ ಬಗ್ಗೆ ವಿಶ್ವ ಸಂಸ್ಥೆಯ ಗಮನ ಸೆಳೆಯಲಾಗಿದ್ದು, ಈ ಅಮಾನವೀಯ ಮತ್ತು ನಿಷೇಧಿತ ಪದ್ಧತಿಯನ್ನು ಕೊನೆಗಾಣಿಸಲು ಅಗತ್ಯ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಲಾಗಿದೆ.
ಇತ್ತೀಚೆಗೆ ( ಫೆಬ್ರವರಿ 17) ರಂದು ಜಿನೇವಾದಲ್ಲಿ ನಡೆದ, ಮಹಿಳೆಯರ ವಿರುದ್ಧದ ಎಲ್ಲ ವಿಧದ ತಾರತಮ್ಯ ನಿರ್ಮೂಲನೆ ಕುರಿತ ವಿಶ್ವಸಂಸ್ಥೆಯ ಸಮಿತಿ’ ಯ 90 ನೇ ಅಧಿವೇಶನದಲ್ಲಿ, ಲಿಂಗಾಧಾರಿತ ಪೂರ್ವಾಗ್ರಹಗಳ ಕುರಿತು ನಡೆದ ಸಾಮಾನ್ಯ ಚರ್ಚೆಯಲ್ಲಿ ತಮ್ಮ ವಿಚಾರ ಮಂಡಿಸಿರುವ ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ತಜ್ಞೆ ಮಂಗಳೂರು ಮೂಲದ ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರು, ಮಹಿಳಾ ಸಫಾಯ್ ಕರ್ಮಚಾರಿಗಳ ಅತ್ಯಂತ ದುಸ್ತರ ಬದುಕಿನ ಅನಾವರಣಗೊಳಿಸಿದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕುರಿತ ಸಮಿತಿ ಸಂಘಟಿಸಿರುವ ಈ ಅಧಿವೇಶನದಲ್ಲಿ ವಿಶ್ವಸಂಸ್ಥೆಗಳ ವಿವಿಧ ಸಮಿತಿ ಗಳ ಮುಖ್ಯಸ್ಥರುಗಳು, ಆಸ್ಟ್ರಿಯಾ, ಕೆನಡಾ, ಜಪಾನ್, ನೆದರ್‌ಲ್ಯಾಂಡ್ಸ್, ಯುಎಇ ಸೇರಿದಂತೆ 14 ರಾಷ್ಟ್ರಗಳ ಪ್ರತಿನಿಧಿಗಳು, ವಿಶ್ವಸಂಸ್ಥೆಯ ಸಂಘಟನೆಯಾದ ಯುನೆಸ್ಕೊ ಪ್ರತಿನಿಧಿಗಳು, ಅಂತರ್‌ರಾಷ್ಟ್ರೀಯ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಚರ್ಚೆಯಲ್ಲಿ ವೈಯಕ್ತಿಕ ನೆಲೆಯಲ್ಲಿ ಪಾಲ್ಗೊಂಡ ಇಬ್ಬರು ತಜ್ಞರ ಪೈಕಿ ಡಾ. ಪ್ರೀತಿ ಒಬ್ಬರಾಗಿದ್ದಾರೆ.
ಡಾ. ಪ್ರೀತಿಎಲ್‌ಎನ್ ಅವರು, ಡಾ. ಅಮಿತ್ ಆನಂದ್ ಅವರೊಂದಿಗೆ ಜಂಟಿಯಾಗಿ ಸಿದ್ಧಪಡಿಸಿ, ಪ್ರಸ್ತುತಪಡಿಸಿರುವ ಹೇಳಿಕೆ (ವಿಡಿಯೋ)ಯನ್ನು ವಿಶ್ವಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಭಾರತದಲ್ಲಿ ಮಲಹೊರುವ ಪದ್ಧತಿ ಬಗೆಗಿರುವ ಕಾನೂನು ವ್ಯವಸ್ಥೆಯ ದೌರ್ಬಲ್ಯ, ಈಅತ್ಯಂತ ದುರ್ಬಲ ಜನವಿಭಾಗ ದಲ್ಲಿರುವ ಅರಿವಿನಕೊರತೆ, ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ (ದೌರ್ಜನ್ಯತಡೆ) ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದೆ ಇರುವುದು, ತಮಗಾದ ಅನ್ಯಾಯ - ದೌರ್ಜನ್ಯಗಳ ವಿರುದ್ಧ ಈಜನರು ಹೋರಾಟ ನಡೆಸುವ ವೇಳೆಯಲ್ಲಿ ಅಧಿಕಾರಿಗಳಿಂದ ಎದುರಾಗುತ್ತಿರುವ ಪ್ರತಿಕೂಲ ಪರಿಸ್ಥಿತಿ, ಇತ್ಯಾದಿ ಈ ಅಸಹಾಯಕ ಮಹಿಳೆಯರ ಬದು ಕನ್ನು ಮತ್ತಷ್ಟು ದುರಂತಮಯಗೊಳಿಸಿರುವುದರಿಂದ, ಈ ಅಮಾನವೀಯ, ಕಾನೂನಿನಲ್ಲಿ ನಿಷೇಧಿತ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಈಜನರಲ್ಲಿ ಸೂಕ್ತಶಿಕ್ಷಣ - ಜಾಗೃತಿ, ಪರ್ಯಾಯ ವೃತ್ತಿಪರ ತರಬೇತಿ, ಕೌಶಲ್ಯಅಭಿವೃದ್ಧಿ ಮತ್ತು ವೃತ್ತಿ, ಹಾಗೂ ಪುನರ್ವಸತಿಯೊಂದಿಗೆ ಸಮಗ್ರವಾದ, ಉತ್ತರದಾಯಿತ್ವವುಳ್ಳ ನೀತಿಯನ್ನು ಅತ್ಯಂತ ತುರ್ತಾಗಿ ಅನುಷ್ಠಾನಕ್ಕೆತರಬೇಕಾಗಿದೆ ಎಂದು ಡಾ. ಪ್ರೀತಿ ವಿಶ್ವಸಂಸ್ಥೆಯ ಗಮನಸೆಳೆದಿದ್ದಾರೆ.
ಬ್ರಿಟಿಷ್ ಸಂಸತ್ತಿನಲ್ಲೂ ಚರ್ಚೆ: ಬ್ರಿಟನ್‌ನಲ್ಲಿರುವ ದಕ್ಷಿಣ ಏಶ್ಯದ ಮಹಿಳೆಯರು ಹೆರಿಗೆ ಮತ್ತು ಪ್ರಸೂತಿಗೆ ಸಂಬಂಧಪಟ್ಟಂತೆ ಎದುರಿಸುತ್ತಿರುವ ಆರೋಗ್ಯ ಸೇವೆಗಳ ಲಭ್ಯತೆ ಕುರಿತು, ಮತ್ತು ಬ್ರಿಟನ್‌ನ ಆಧುನಿಕ ಗುಲಾಮಗಿರಿ ಕಾಯ್ದೆ, 2015 ಮತ್ತು ಅಕ್ರಮ ವಲಸೆ ಕಾಯ್ದೆ, 2023 ಕುರಿತು ಡಾ. ಪ್ರೀತಿ ಮತ್ತು ಡಾ. ಅಮಿತ್ ಅವರ ಸಂಶೋಧನಾ ಧಾರಿತ ವರದಿಗಳ (written evidences) ಗಳ ಮಹತ್ವವನ್ನು ಬ್ರಿಟನ್ ಸಂಸತ್ತಿನಲ್ಲಿ ಚರ್ಚಾ ತಮ್ಮ ವರದಿಗಳಲ್ಲಿ ಇವರನ್ನು ಉಲ್ಲೇಖಸಿರುವುದು ಮತ್ತು ಈ ಇಬ್ಬರು ಕಾನೂನು ತಜ್ಞರು ಇತ್ತೀಚೆಗೆ ಬ್ರಿಟನ್ ಸಂಸತ್ತಿಗೆ ಮಾನಸಿಕ ಆರೋಗ್ಯ ಕುರಿತ ಕರಡು ಕಾಯ್ದೆ ಬಗ್ಗೆ ಸಲ್ಲಿಸಿರುವ ವಿಶ್ಲೇಷಣೆಯನ್ನು ಸಂಸತ್ತು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ವಿಶ್ವಸಂಸ್ಥೆಯಲ್ಲೂ: ಈ ಇಬ್ಬರು ಸಂಶೋಧಕರು ಈ ಹಿಂದೆ ವಿಶೇಷಚೇತನರ ಹಕ್ಕುಗಳ ಬಗ್ಗೆ, ಮಹಿಳೆಯರ ಹಕ್ಕುಗಳ ಬಗ್ಗೆ, ಅಮೇರಿಕಾದಲ್ಲಿ ಆಫ್ರಿಕ ಮೂಲದ ಜನರ ವಿರುದ್ಧ ನಡೆಯುತ್ತಿರುವ ತಾರತಮ್ಯದ ಬಗ್ಗೆ, ಭಾರತದಲ್ಲಿನ ಲಿಂಗಾಧಾರಿತ ಹಿಂಸೆಗಳ ಬಗ್ಗೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಮತ್ತು ತಡೆಯುವ ಕ್ರಮಗಳ ಬಗ್ಗೆ ವಿಶ್ವಸಂಸ್ಥೆಯ ವಿವಿಧ ಸಮಿತಿಗಳ ಗಮನಸೆಳೆದಿರುತ್ತಾರೆ ಮತ್ತು ವಿಶ್ವಸಂಸ್ಥೆಯು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಇವುಗಳನ್ನು ಈಗಾಗಲೇ ಪ್ರಕಟಪಡಿಸಿರುವುದು ಈ ಇಬ್ಬರ ಸಂಶೋಧನೆಗೆ ಸಿಕ್ಕಿರುವ ವಿಶ್ವಮಾನ್ಯತೆಯಾಗಿದೆ.







