ಅ. ಭಾ. ಬ್ಯಾರಿ ಪರಿಷತ್ ಮಹಿಳಾ ಘಟಕದಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಸ್ಪರ್ಧೆಗಳಿಗೆ ಆಹ್ವಾನ
ಮಂಗಳೂರು : ಮಾರ್ಚ್ 8 ರಂದು ಜರುಗಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದಿಂದ ಮಹಿಳೆಯರಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಘಟಕಾಧ್ಯಕ್ಷೆ ಶಮೀಮ ಕುತ್ತಾರ್ ತಿಳಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟಂತೆ " ಬ್ಯಾರಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳು " ಎಂಬ ವಿಷಯದ ಕುರಿತು ಕನ್ನಡ ಲಿಪಿ ಬಳಸಿ ಬ್ಯಾರಿ ಭಾಷೆಯಲ್ಲಿ ನಾಲ್ಕು ಪುಟಗಳಿಗೆ ಮೀರದಂತೆ ಪ್ರಬಂಧ ಬರೆದು ಆನ್ ಲೈನ್ ಮೂಲಕ ಘಟಕದ ಪ್ರಧಾನ ಕಾರ್ಯದರ್ಶಿ ( ರಮೀಝ ಯಂ.ಬಿ 9035231803 ) ಉಪಾಧ್ಯಕ್ಷೆ ( ಅಸ್ಮತ್ ವಗ್ಗ 7204965862 ) ನಂಬರಿನ ವಾಟ್ಸಪ್ ಗೆ ಮಾರ್ಚ್ 6 ರ ಮುಂಚಿತವಾಗಿ ಕಳುಹಿಸಿಕೊಡುವಂತೆ ಅವರು ತಿಳಿಸಿದ್ದು ವಿಜೇತರಿಗೆ ಮಹಿಳಾ ದಿನಾಚರಣೆಯಂದು ಬಹುಮಾನ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





