ಮಂಗಳೂರು| ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಬಜಾಲ್ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ

ಮಂಗಳೂರು, ಮಾ.8: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಬಜಾಲ್ ನಾಗರಿಕ ಸಮಿತಿ ಬದ್ರಿಯಾ ಜುಮಾ ಮಸೀದಿ ಬಜಾಲ್ ನಂತೂರ್ ಮೋಹಿಯುದ್ದಿನ್ ಜುಮಾ ಮಸೀದಿ ಬಜಾಲ್ ಪಡ್ಪು ಹಾಗೂ ಗೌಸಿಯಾ ಜುಮಾ ಮಸೀದಿ ಫೈಸಲ್ ನಗರ ಇದರ ಜಂಟಿ ಆಶ್ರಯದಲ್ಲಿ ಶನಿವಾರ ರಾತ್ರಿ ಬಜಾಲ್ ಕಳ್ಳಕಟ್ಟೆಯಲ್ಲಿ ಪ್ರತಿಭಟನೆ ನಡೆಯಿತು.
ಬಜಾಲ್ ಪಡ್ಪು ಮಸೀದಿ ಖತೀಬ್ ರಫೀಕ್ ಯಾಮಾನಿ ದುಆಗೈದು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗೌಸಿಯಾ ಜುಮಾ ಮಸೀದಿ ಖತೀಬ್ ಝುಬೈರ್ ಧಾರಿಮಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರುಗಳಾದ ರವೂಫ್ ಬಜಾಲ್, ಅಶ್ರಫ್ ಬಜಾಲ್, ಗೌಸಿಯಾ ಜುಮಾ ಮಸೀದಿ ಅಧ್ಯಕ್ಷರಾದ ರಝಾಕ್, ಪಡ್ಪು ಮಸೀದಿ ಅಧ್ಯಕ್ಷರಾದ ಬಶೀರ್ ಮತ್ತು ಎಸ್ ಡಿ ಪಿ ಐ ಬಜಾಲ್ ವಾರ್ಡ್ ಅಧ್ಯಕ್ಷರಾದ ಇಕ್ಬಾಲ್ ಬಜಾಲ್ ಉಪಸ್ಥಿತರಿದ್ದರು.
Next Story