ದ.ಕ. ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಆಶ್ರಯದಲ್ಲಿ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಗಳೂರು, ಮಾ.10: ದ.ಕ. ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಆಶ್ರಯದಲ್ಲಿ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸೋಮವಾರ ನಗರದ ಸಂಘದ ಕಚೇರಿಯ ಆವರಣದಲ್ಲಿ ನಡೆಯಿತು.
ಎಸ್ ವಿ ಎಂಟರ್‌ಪ್ರೈಸಸ್‌ನ ಸಂಸ್ಥಾಪಕಿ ಅಶ್ವಿನಿ ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮೊದಲ ತಲೆಮಾರಿನ ಉದ್ಯಮಿಯಾಗಿ ತಮ್ಮ ಪ್ರಯಾಣದ ಒಳನೋಟಗಳನ್ನು ಹಂಚಿಕೊಂಡರು.
ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ಪ್ರತಿಷ್ಠಿತ ಮಹಿಳಾ ಉದ್ಯಮಿಗಳನ್ನು ಈ ಸಂದರ್ಭ ದಲ್ಲಿ ಸನ್ಮಾನಿಸಲಾಯಿತು. ಚಿತ್ರ ಭಟ್, ಕೃಷ್ಣಲೀಲಾ, ಕಸ್ತೂರಿ ಮಹೇಶ್ , ಪೂರ್ಣಿಮಾ ಭಟ್ ಹಾಗು ನಯನ ಪ್ರದೀಪ್ ಇವರನ್ನು ಅವರ ಅತ್ಯುತ್ತಮ ಕೊಡುಗೆ ಮತ್ತು ಅನುಕರಣೀಯ ಸಾಧನೆಗಳಿಗಾಗಿ ಶ್ಲಾಘಿಸಿ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ವಿಶಾಲ್ ಎಲ್. ಸಾಲಿಯನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮ ವನ್ನು ಎಂಎಸ್‌ಎಂಇ ಡಿಎಫ್‌ಒ ಶಾಖಾ ಸಹಾಯಕ ನಿರ್ದೇಶಕಿ ಶ್ರುತಿ ಜಿ.ಕೆ, ಕೃಷಿ ಸಹಾಯಕ ನಿರ್ದೇಶಕಿ ಪ್ರೇಮಾ ಕಾಂಬ್ಳೆ , ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿ ಮಹಿಳಾ ಸದಸ್ಯರಿಗೆ ಸ್ವಾವಲಂಬಿಯಾಗಿ ಬೆಳೆಯಲು ಹಾರೈಸಿದರು.
ಕದ್ರಿ ಹಿಲ್ಸ್‌ನ ಮಹಿಳಾ ಐಟಿಐ ಪ್ರಾಂಶುಪಾಲ ಶಿವಕುಮಾರ್ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರನ್ನು ಗೌರವಿಸಲಾಯಿತು.