ಮಗುವಿನೊಂದಿಗೆ ತಾಯಿ ನಾಪತ್ತೆ: ಪ್ರಕರಣ ದಾಖಲು

ಮಂಗಳೂರು, ಮಾ.10: ಮಹಿಳೆಯೊಬ್ಬರು ತನ್ನ ಆರು ವರ್ಷ ಪ್ರಾಯದ ಮಗುವಿನೊಂದಿಗೆ ಕಾಣೆಯಾದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಸ್ತ್ರಿ ಕೆಲಸ ಮಾಡಿಕೊಂಡಿರುವ ಪಾಂಡುನಾಯ್ಕ್ ಪತ್ನಿ ಮತ್ತು ಮಕ್ಕಳಾದ ಪವನ್ ಹಾಗೂ ಮಯೂರಿ ಜೊತೆ ವಾಸವಾಗಿದ್ದರು. ಮಾ.7ರಂದು ಪಾಂಡುನಾಯ್ಕರ ಪತ್ನಿ ನೇತ್ರಾಬಾಯಿ (29) ಮತ್ತು 6 ವರ್ಷ ಪ್ರಾಯದ ಮಯೂರಿ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಂದು ಸಂಜೆ 6ಕ್ಕೆ ಪಾಂಡುನಾಯ್ಕ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಆವಾಗ ಪತ್ನಿ ಮಕ್ಕಳು ಮನೆ ಯಲ್ಲೇ ಇದ್ದರು ಎನ್ನಲಾಗಿದೆ. ಸ್ವಲ್ಪ ಸಮಯದ ಬಳಿಕ ಪಾಂಡುನಾಯ್ಕ ತನ್ನ ಅಣ್ಣ ಮಂಜು ಮನೆಗೆ ತೆರಳಿ 7 ಗಂಟೆಗೆ ಮರಳಿ ಬಂದಾಗ ನೇತ್ರಾಬಾಯಿ ಮತ್ತು ಮಯೂರಿ ಕಾಣೆಯಾಗಿದ್ದರು.
ನೇತ್ರಾಬಾಯಿ ಈ ಹಿಂದೆಯೂ ಎರಡು ಬಾರಿ ಕಾಣೆಯಾಗಿ ಪುನ: ಮನೆಗೆ ಮರಳಿದ್ದರು ಎನ್ನಲಾಗಿದೆ. ನೇತ್ರಾಬಾಯಿ ಯಾರ ಜೊತೆಯೋ ಫೋನಿನಲ್ಲಿ ಅತೀ ಹೆಚ್ಚು ಮಾತನಾಡುತ್ತಾ ಸಮಯ ಕಳೆಯುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ಪಾಂಡುನಾಯ್ಕ ಹೆಂಡತಿಗೆ ಬುದ್ಧಿಮಾತು ಹೇಳಿದ್ದು, ಆದರೂ ತನ್ನ ಮಾತು ಕೇಳದೆ ಮಗಳೊಂದಿಗೆ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.