ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರು ದುರುಪಯೋಗದ ವಿರುದ್ಧ ಕ್ರಮ: ಎಂ.ಗುರುಮೂರ್ತಿ

ಮಂಗಳೂರು: ಪ್ರೊ.ಬಿ.ಕೆ.ಕೃಷ್ಣಪ್ಪನವರಿಂದ ಸ್ಥಾಪಿತವಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರನ್ನು ಕೆಲವರು ದುರುಪಯೋಗ ಪಡಿಸಿ ಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು ಇದರ ಬಗ್ಗೆ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಪ್ರೊ.ಬಿ.ಕೆ. ಕೃಷ್ಣಪ್ಪ ನವರಿಂದ ಸ್ಥಾಪಿತವಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ(47/1974.75)ಯ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯ ದಲ್ಲಿ ಪ್ರೊ.ಬಿ.ಕೆ.ಕೃಷ್ಣಪ್ಪರವರಿಂದ ಸ್ಥಾಪಿತವಾದ ದಲಿತ ಸಂಘರ್ಷ ಸಮಿತಿಯ ಚಳವಳಿಯನ್ನು ಕ್ರಿಯಾಶೀಲಗೊಳಿಸಲು ಸಮಿತಿಗಳನ್ನು ಪುನಾರಚಿಸಲಾಗುತ್ತಿದೆ. ಪ್ರೊ.ಕೃಷ್ಣ ಪ್ಪನವರ ಅಶಯದಂತೆ ದಲಿತರೆಂದರೆ ಈ ನಾಡಿನಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಸೇರಿದಂತೆ ಎಲ್ಲಾ ರೀತಿ ಯಲ್ಲೂ ಹಿಂದುಳಿದ ಬಡಜನರು ಎಂದು ಪರಿಗಣಿಸಲಾಗುತ್ತದೆ. ಈ ಜನರು ಸುಶಿಕ್ಷಿತರಾಗಿ ಸಂಘಟಿತ ರಾಗಿ ತಮ್ಮ ಹಕ್ಕುಗಳನ್ನು ಪಡೆಯುವಂತಾಗಬೇಕು ಈ ನಿಟ್ಟಿನಲ್ಲಿ ಹೋರಾಡಲು ಸಂಘಟಿತರಾಗ ಬೇಕು ಎಂದು ಅವರು ಆಶಿಸಿದ್ದರು.ಅದರಂತೆ
ಈ ಚಳವಳಿಯನ್ನು ಪುನರ್ ಸಂಘಟಿಸಲು ಸಮಿತಿಗಳನ್ನು ಪುನಾರಚಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯನ್ನು ಪುನಾರಚನೆ ಮಾಡಲಾಗಿದೆ ಎಂದು ಗುರುಮೂರ್ತಿ ತಿಳಿಸಿದ್ದಾರೆ.
ರಾಜ್ಯದಲ್ಲಿ ದಲಿತರ ಮತಪಡೆದು ಅಧಿಕಾರ ಪಡೆದವರಿಂದಲೂ ದಲಿತರಿಗೆ ಮೀಸಲಾದ ಅನುದಾನಗಳು ಸಮರ್ಪವಾಗಿ ಬಳಕೆಯಾಗುತ್ತಿಲ್ಲ.ಪ.ಜಾ,ಪ.ಪಂಗಳಿಗೆ ಸಂಬಂಧಿಸಿದಂತೆ ಯೋಜನೆಗಳಿಗೆ ವ್ಯಯ ಮಾಡಬೇಕಾದ ಅನುದಾನ ಬಳಕೆಯಾಗಿದೆ ಇರುವ ಉದಾಹರಣೆಗಳಿಗೆ ಇಂತಹ ಸಂದರ್ಭಗಳಲ್ಲಿ ಈ ರೀತಿಯ ಲೋಪವಾಗಲು ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕಾದ ಅಗತ್ಯವಿದೆ, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಪುನಾರಚನೆ ಮಾಡಲಾಗುತ್ತಿದೆ. ಅಂಬೇಡ್ಕರ್ ತತ್ತ್ವದ ಬಗ್ಗೆ ಬದ್ಧತೆ ಇಲ್ಲದವರು ದಲಿತ ಸಂಘಟನೆಯ ಹೆಸರನ್ನು ದುರುಪಯೋಗ ಪಡಗೋಷ್ಠಿಯಲ್ಲಿ ದರ ವಿರುದ್ಧ ಅಧಿಕೃತ ಸಂಘಟನೆಯಾದ ಪ್ರೊ.ಕೃಷ್ಣಪ್ಪ ರಿಂದ ಸ್ಥಾಪಿತವಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಾಗೃತಿ ಮೂಡಿಸಲಿದೆ ಎಂದು ಗುರುಮೂರ್ತಿ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಂಚಾಲಕ ಮಹಾಲಿಂಗ ಕೆ,ಜಿಲ್ಲಾ ಸಂಚಾಲಕ ಕೃಷ್ಣ ಪ್ಪ ಸುಣ್ಣಾಜೆ, ಖಜಾಂಜಿ ಭಾಸ್ಕರ ಎಚ್ ,ಸಂಘಟನಾ ಸಂಚಾಲಕರಾದ ಸುಂದರ ನಿಡ್ಪಳ್ಳಿ, ಎ.ಕೆ.ರಾಜು, ಬಾಬು ಎಲ್,ಪುಟ್ಟಣ್ಣ,ಮಹೇಶ್,ಅಣ್ಣು ಸಾಧನ,ಯಶೋಧ ಮೊದಲಾದವರು ಉಪಸ್ಥಿತರಿದ್ದರು.