ಮಂಗಳೂರು| ಮರ್ಸಿಕೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಳೆಗಾರರ ಜೊತೆ ಮಾಹಿತಿ ಕಾರ್ಯಕ್ರಮ

ಮಂಗಳೂರು: ಮರ್ಸಿಕೇರ್ ಚಾರಿಟೇಬಲ್ ಟ್ರಸ್ಟ್ (ರಿ), ಮಂಗಳೂರು ವತಿಯಿಂದ ಬೆಳೆಗಾರರ ಜೊತೆ ಮಾಹಿತಿ ಕಾರ್ಯಕ್ರಮ ಫಜೀರಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷರಾದ ಸಿ ಎ ಮ್ಯಾಕ್ಸಿಮ್ ಮೈಕಲ್ ಫೆರ್ನಾಂಡಿಸ್ , ಮುಖ್ಯ ಅತಿಥಿ ಡಾ ರೋಹನ್ ಕೊಲಾಸೊ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ತೋಟಗಾರಿಕಾ ಇಲಾಖೆ ಬಂಟ್ವಾಳ ಇದರ ಹಿರಿಯ ಸಹಾಯಕ ನಿರ್ದೇಶಕರಾದ ಜ್ಯೋ ಪ್ರದೀಪ್ ಡಿಸೋಜ ರವರು ಭಾಗವಹಿಸಿದರು. ಈ ವೇಳೆ ಕೃಷಿಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾದ ಸಿ ಎ ಮ್ಯಾಕ್ಸಿಮ್ ಮೈಕಲ್ ಫೆರ್ನಾಂಡಿಸ್ ಮಾತನಾಡಿ, " ಕೃಷಿಯಲ್ಲಿ ಅನುಭವ ಇರುವವರು ಇತರರಿಗೆ ಮಾರ್ಗದರ್ಶನ ಕೊಟ್ಟರೆ ಇತರ ಕೃಷಿಕರು ನಷ್ಟವನ್ನು ತಪ್ಪಿಸಿ ಲಾಭವನ್ನು ಮಾಡಬಹುದು " ಎಂದರು.
ಮುಖ್ಯ ಅತಿಥಿ ಡಾ ರೋಹನ್ ಕೊಲಾಸೊ ಮಾತನಾಡಿ, " ನಾವು ಮಾಡಿದ ಕೃಷಿಯನ್ನು ಪ್ರತಿದಿನ ಗಮನಿಸುತ್ತಾ ಇದ್ದಲ್ಲಿ ಅದು ನಮ್ಮ ಕುಟುಂಬದ ಸದಸ್ಯರಾಗುತ್ತದೆ, ಕೃಷಿಯಲ್ಲಿ ಇರುವಷ್ಟು ಸಂತೋಷ, ಸಮೃದ್ಧಿ ಮತ್ತು ಸಾರ್ಥಕತೆ ಬೇರೆ ಯಾವುದೇ ಉದ್ದಿಮೆಯಲ್ಲಿ ಇರುವುದಿಲ್ಲ" ಎಂದರು.
ತೋಟಗಾರಿಕಾ ಇಲಾಖೆ ಬಂಟ್ವಾಳ ಇದರ ಹಿರಿಯ ಸಹಾಯಕ ನಿರ್ದೇಶಕರಾದ ಜ್ಯೋ ಪ್ರದೀಪ್ ಡಿಸೋಜ ರವರು ಅಡಿಕೆ ಕೃಷಿಯ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡರು. ಅಡಿಕೆ ಕೃಷಿಯಲ್ಲಿ ಕೃಷಿಕರು ಎದುರಿಸುವ ಸವಾಲುಗಳು ಮತ್ತು ಪರಿಹಾರವನ್ನು ತಿಳಿಸಿಕೊಡಲಾಯಿತು.
ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿರುವ ಡಾ ರೋಹನ್ ಕೊಲಾಸೊ, ಗ್ಲೇನ್ ವಿಲ್ ರೋಚ್, ಝಕಾರಿಯಾ ಪಿ ಎಂ ಮಲಾರ್, ಸುರೇಶ ಶೆಟ್ಟಿ ಇನೋಳಿ , ಮೆಲ್ವಿನ್ ಸಂತೋಷ್ ಡಿಸೋಜ ಕೊಣಾಜೆ ,ವಿಲ್ಸನ್ ಡಿಸೋಜ ಹರೇಕಳ ರವರನ್ನು ಸನ್ಮಾನಿಸಲಾಯಿತು.
ಮರ್ಸಿಕೇರ್ ಚಾರಿಟೇಬಲ್ ಟ್ರಸ್ಟ್ (ರಿ), ಮಂಗಳೂರು ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು , ಈ ಕಾರ್ಯಕ್ರಮ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು .ಮ್ಯಾಕ್ಸಿಮ್ ಮೈಕಲ್ ಫೆರ್ನಾಂಡಿಸ್ ಸ್ವಾಗತಿಸಿದರು , ವಿನ್ಸೆಂಟ್ ಡಿಸೋಜ ಧನ್ಯವಾದ ಸಮರ್ಪಣೆ ಮಾಡಿದರು ಮತ್ತು ರೋಶನ್ ಡಿಸೋಜ ಕಾರ್ಯಕ್ರಮ ನಿರೂಪಣೆ ಮಾಡಿದರು.







