ದ.ಕ. ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ
ಮಂಗಳೂರು, ಮಾ.12:ದ.ಕ., ಉಡುಪಿ, ಕೊಡಗು ಜಿಲ್ಲೆಗಳ 18ರಿಂದ 25 ವರ್ಷದೊಳಗಿನ ಸಾರ್ವಜನಿ ಕರಿಗೆ 'ವಿಕಸಿತ ಭಾರತ ಯುವ ಸಂಸತ್ತು' ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಆಸಕ್ತರು ಮಾ.16ರೊಳಗೆ ಮೈ ಭಾರತ್ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಬೇಕು. ಮೊದಲ ಹಂತ ದಲ್ಲಿ ತಮ್ಮ ಹಿತದೃಷ್ಟಿಯಲ್ಲಿ ವಿಕಾಸ ಭಾರತವೆಂದರೆ ಏನೆಂಬ ವಿಷಯದ ಕುರಿತು ಒಂದು ನಿಮಿಷದ ವೀಡಿಯೋ ಅಪ್ಲೋಡ್ ಮಾಡಬೇಕು. ಎರಡನೇ ಹಂತದಲ್ಲಿ ಈ ವೀಡಿಯೋ ತುಣುಕುಗಳನ್ನು ಸ್ಕ್ರೀನಿಂಗ್ ಕಮಿಟಿಯವರು ಮಾ.17ರ ನಂತರ ಪ್ರತೀ ಜಿಲ್ಲೆಯಿಂದ ತಲಾ 50ರಂತೆ 150 ಯುವ ಜನರನ್ನು ಆಯ್ಕೆ ಮಾಡಲಿದ್ದಾರೆ.
ಆಯ್ಕೆಯಾದ 150 ಯುವ ಜನರು 'ಒಂದು ದೇಶ ಒಂದು ಚುನಾವಣೆ' ಎಂಬ ವಿಷಯದ ಕುರಿತು ತಲಾ ಮೂರು ನಿಮಿಷಗಳ ಭಾಷಣ ಸ್ಪರ್ಧೆಯನ್ನು ನಗರದ ಸಂತ ಆಗ್ನೆಸ್ ಕಾಲೇಜಿನಲ್ಲಿ ಮಾ. 22 ಮತ್ತು 23ರಂದು ನಡೆಸಲಾಗುತ್ತದೆ. ಐವರು ತೀರ್ಪುಗಾರರ ಸಮಿತಿಯು 10 ವಿಜೇತರನ್ನು ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆ ಮಾಡುತ್ತಾರೆ.
ಹೆಚ್ಚಿನ ಮಾಹಿತಿಗೆ ನೆಹರೂ ಯುವ ಕೇಂದ್ರ ಸಂಘಟನೆ ಉಪನಿರ್ದೇಶಕರು (ಮೊ.ಸಂ: 8439894706) ಅಥವಾ ಡಾ. ಶೇಸಪ್ಪ ಕೆ, ಸಂಯೋಜಕರು (ಮೊ.ಸಂ: 7813065855), ಎನ್‌ಎಸ್‌ಎಸ್ ಅಧಿಕಾರಿ ಡಾ.ಉದಯ ಕುಮಾರ್, (ಮೊ.ಸಂ: 9448061961) ಸಂಪರ್ಕಿಸುವಂತೆ ಸಂತ ಆಗ್ನೆಸ್ ಕಾಲೇನಜಿನ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.