ಎಸ್‌ಡಿಪಿಐ ರಾಷ್ಟ್ರಾಧ್ಯಕ್ಷ ಫೈಝಿ ಬಂಧನ ಖಂಡಿಸಿ ವಿಮ್ ಪ್ರತಿಭಟನೆ

ಮಂಗಳೂರು, ಮಾ.12: ಎಸ್‌ಡಿಪಿಐ ರಾಷ್ಟ್ರಾಧ್ಯಕ್ಷ ಎಂ.ಕೆ. ಫೈಝಿ ಅವರನ್ನು ಇ.ಡಿ. ತನಿಖಾ ಸಂಸ್ಥೆಯು ಬಂಧಿಸಿರುವುದನ್ನು ಖಂಡಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾದ್ಯಂತ ಪ್ರತಿಭಟನೆ ಮಂಗಳವಾರ ಪ್ರತಿಭಟನೆ ನಡೆಸಿದೆ.
ತಕ್ಷಣ ಫೈಝಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೆ ಇ.ಡಿ.ತನಿಖಾ ಸಂಸ್ಥೆಯ ಅಕ್ರಮದ ವಿರುದ್ಧ ಬಿತ್ತಿಪತ್ರ ಪ್ರದರ್ಶಿಸಲಾಯಿತು. ವಿಮ್‌ನ ರಾಜ್ಯ ನಾಯಕಿ ಯರು, ಜಿಲ್ಲಾ ಮತ್ತು ಅಸೆಂಬ್ಲಿ ಮಟ್ಟದ ನಾಯಕಿಯರು, ಕಾರ್ಯಕರ್ತರ ಸಮಾಜದ ನಾನಾ ಸಂಘಟನೆ ಗಳ ಪ್ರತಿಭಟನೆಗೆ ಕೈ ಜೋಡಿಸಿತ್ತು.
Next Story