Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಬಿಟ್ಟು ಹೋದ ತಂದೆ ಮೇಲಿನ ಹಠಕ್ಕಾಗಿ...

ಬಿಟ್ಟು ಹೋದ ತಂದೆ ಮೇಲಿನ ಹಠಕ್ಕಾಗಿ "ಕಿಕ್ ಬಾಕ್ಸರ್" ಆದ ಮೈಸೂರಿನ ಬೀಬಿ ಫಾತಿಮಾ

"ಮಂಗಳಮುಖಿ" ಬಿಕ್ಷುಕ ಅಕ್ರಮ್ ಪಾಷಾ ಆಸರೆಯಲ್ಲಿ ಬೆಳೆದ ಸಾಧಕಿಯನ್ನು ಗೌರವಿಸಿದ ಮಂಗಳೂರ ಸಮಾಜ ಸೇವಕರು

ವಾರ್ತಾಭಾರತಿವಾರ್ತಾಭಾರತಿ12 March 2025 9:53 PM IST
share
ಬಿಟ್ಟು ಹೋದ ತಂದೆ ಮೇಲಿನ ಹಠಕ್ಕಾಗಿ ಕಿಕ್ ಬಾಕ್ಸರ್ ಆದ ಮೈಸೂರಿನ ಬೀಬಿ ಫಾತಿಮಾ

ಮಂಗಳೂರು: ಹುಟ್ಟಿದ್ದೆಲ್ಲಾ ಹೆಣ್ಣಾಯಿತೆಂದು ಪತ್ನಿ ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಬಿಟ್ಟು ಹೋದ ಗಂಡನಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬಕ್ಕೆ ಆಸರೆಯಾದ ಮಂಗಳಮುಖಿ ಅಕ್ರಮ್ ಪಾಷಾ ಮತ್ತು ಆ ಕುಟುಂಬದಲ್ಲಿ ಬೆಳೆದ ಹಿರಿಯ ಹೆಣ್ಮಗಳು ಬೀಬಿ ಫಾತಿಮಾಳ ಸಾಧನೆಯ ಹಾದಿ ರೋಚಕ.

ಮೈಸೂರಿನ ಉದಯಗಿರಿ ಮಸ್ಜಿದೇ ತೌಹೀದ್ ಬಳಿಯಿರುವ ಗಲ್ಲಿಯಲ್ಲಿ ಸಿಮೆಂಟ್ ಶೀಟಿನ ಬಾಡಿಗೆ ಕೊಠಡಿಯಲ್ಲಿರುವ ಈ ಕುಟುಂಬವನ್ನು ಮಾ.12ರಂದು ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕರಾದ ರಶೀದ್ ವಿಟ್ಲ ಮತ್ತವರ ತಂಡ ಭೇಟಿಯಾಗಿ ಸಹಾಯಧನ ನೀಡಿ ಸನ್ಮಾನಿಸಿತು. ಅಬೂಬಕರ್ ಪುತ್ತು ಉಪ್ಪಿನಂಗಡಿ, ಮಹಮ್ಮದ್ ಟಿ.ಕೆ. ಹಾಗೂ ಉಬೈದ್ ವಿಟ್ಲ ಬಝಾರ್ ತಂಡದಲ್ಲಿದ್ದರು.


ಬೀಬಿ ಫಾತಿಮಾ ಅವರ ತಾಯಿಗೆ ನಾಲ್ಕು ಹೆಣ್ಮಕ್ಕಳು. ಗಂಡು ಮಕ್ಕಳಿಲ್ಲ ಎಂಬ ಕಾರಣಕ್ಕೆ ಪತಿ 19 ವರ್ಷದ ಹಿಂದೆ ಬಿಟ್ಟು ಹೋಗಿದ್ದ. ಇದರಿಂದ ನೊಂದ ಕುಟುಂಬ ಆ ಸಂದರ್ಭವೇ ಊರು ಬಿಟ್ಟು ಆತ್ಮಹತ್ಯೆಗೆ ಯತ್ನಿಸಿತ್ತು. ಆವಾಗ ಅವರ ನೆರವಿಗೆ ಬಂದವರು ಮಂಗಳಮುಖಿ ಬಿಕ್ಷುಕ ಅಕ್ರಮ್ ಪಾಷಾ. ಇವರು ಈ ಐದೂ ಮಂದಿಯನ್ನು ಮೈಸೂರಿಗೆ ಕರೆದುಕೊಂಡು ಬಂದು ಬಾಡಿಗೆ ಮನೆಯಲ್ಲಿಟ್ಟರು. ನಾಲ್ಕು ಮಕ್ಕಳಲ್ಲಿ ಹಿರಿಯವಳಾದ ಬೀಬಿ ಫಾತಿಮಾಳನ್ನು ದತ್ತು ತೆಗೆದುಕೊಂಡ ಮಂಗಳಮುಖಿ ಅಕ್ರಮ್ ಪಾಷಾ ಆಕೆಯ ಜೀವನ ಮತ್ತು ಸಾಧನೆಗೆ ಆಸರೆಯಾದರು. ಬಿಕ್ಷೆ ಬೇಡಿ ಸಾಕಿ ಸಲಹಿದ ಹುಡುಗಿ ಇದೀಗ ರಾಷ್ಟ್ರವೇ ಗುರುತಿಸುವ "ಕಿಕ್ ಬಾಕ್ಸರ್" ಆಗಿ ಹೊರಹೊಮ್ಮಿದ್ದಾರೆ.

ತಂದೆಯ ತಿರಸ್ಕಾರ ಬೀಬಿ ಫಾತಿಮಾಳ ಈ ಹಠ ಮತ್ತು ಛಲಕ್ಕೆ ಕಾರಣ. ಗಂಡು ಮಕ್ಕಳಿಲ್ಲವೆಂದು ಬಿಟ್ಟು ಹೋದವನ ಮುಂದೆ ಗಂಡೆದೆಯಿಂದ ಬೀಗಬೇಕೆಂಬ ಕನಸು ನನಸಾಗುತ್ತಿರುವ ಸಂಭ್ರಮ ಬೀಬಿ ಫಾತಿಮಾಳದ್ದು. ಮಂಗಳಮುಖಿ ಮತ್ತು ಈ ಸಾಧಕಿ ಇಬ್ಬರೇ ಬಾಡಿಗೆ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಫಾತಿಮಾ 10 ನೇ ತರಗತಿಗೆ ಓದುತ್ತಿದ್ದಾಳೆ. ಫಾತಿಮಾಳ ತಾಯಿ ಮತ್ತು ಇತರ 3 ಹೆಣ್ಮಕ್ಕಳಿಗೆ ಅಕ್ರಮ್ ಪಾಷಾ ಬೇರೆಯೇ ಬಾಡಿಗೆ ಮನೆ ಮಾಡಿಕೊಟ್ಟಿದ್ದಾರೆ. ಎರಡೂ ಮನೆಯ ಬಾಡಿಗೆಯನ್ನು 65ರ ಹರೆಯದ ಅಕ್ರಮ್ ಪಾಷಾ ಅವರೇ ಬಿಕ್ಷೆ ಬೇಡಿ ಕಟ್ಟುತ್ತಿದ್ದಾರೆ.


ಬೀಬಿ ಫಾತಿಮಾಳಿಗೆ ಈಗ 20ರ ಹರೆಯ. ಕೆಲ ವರ್ಷ ಕಾರಣಾಂತರ ಶಾಲೆ ಬಿಟ್ಟಿದ್ದಳು. ಕಳೆದ 12 ವರ್ಷದಿಂದ ಕಿಕ್ ಬಾಕ್ಸಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಈತನಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರ್‌ ರಾಷ್ಟ್ರ ಮಟ್ಟದಲ್ಲಿ 29 ಗೋಲ್ಡ್ ಮೆಡಲ್ ಪಡೆದಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅಂತರ್‌ ರಾಷ್ಟ್ರ ಸ್ಪರ್ಧೆಯಲ್ಲಿ ಕೈ ನೋವಿದ್ದರೂ ಎರಡು ಬೆಳ್ಳಿಪದಕವನ್ನು ಗಳಿಸಿದ್ದಾರೆ. ಮುಂದಕ್ಕೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಬೇಕೆಂಬ ಹೆಬ್ಬಯಕೆ ಆಕೆಯದ್ದು. ಜೊತೆಗೆ ತನ್ನ ಕುಟುಂಬವನ್ನು ಮತ್ತು ಸಾಕಿದ ವಯಸ್ಕರಾದ ಮಂಗಳಮುಖಿಯ ಜವಾಬ್ದಾರಿ ಬೀಬಿ ಫಾತಿಮಾ ಮೇಲಿದೆ. ಅದಕ್ಕಾಗಿ ಬಾಡಿಗೆ ಮನೆಯ ಮೇಲಿನ ಮಹಡಿಯಲ್ಲಿ ಶೀಟ್ ಹಾಕಿ ಕಿಕ್ ಬಾಕ್ಸಿಂಗ್ ಕೋಚಿಂಗ್ ಸೆಂಟರ್ ತೆರೆದು ದುಡಿಯಬೇಕೆಂಬ ಹಂಬಲ ಫಾತಿಮಾಳದ್ದು. ಆದರೆ ಇದಾವುದಕ್ಕೂ ಅವರಲ್ಲಿ ದುಡ್ಡಿಲ್ಲ. ಅದ್ಭುತ ಸಾಧಕಿಯ ಕನಸು ಕಮರದಂತೆ ನೋಡಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಸ್ವಂತ ಕಾಲಲ್ಲಿ ನಿಂತು ದುಡಿದು ಒಲಂಪಿಕ್ ತನಕ ತಲುಪಬೇಕೆಂಬ ಬೀಬಿ ಫಾತಿಮಾಳ ಕನಸು ನನಸು ಮಾಡಲು ನಾವೆಲ್ಲಾ ಸೇರಿ ಪ್ರಯತ್ನಿಸೋಣ ಎಂದು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕರಾದ ರಶೀದ್ ವಿಟ್ಲ ತಿಳಿಸಿದ್ದಾರೆ.










share
ವಾರ್ತಾಭಾರತಿ
ವಾರ್ತಾಭಾರತಿ
Next Story
X