ಮೊಹಮ್ಮದ್ ಕುಂಜತ್ ಬೈಲ್ ಸರಳ ಸಜ್ಜನಿಕೆಯ ನೇತಾರ: ಯು.ಎಚ್. ಖಾಲಿದ್ ಉಜಿರೆ

ಮಂಗಳೂರು : ಅಖಿಲ ಭಾರತ ಬ್ಯಾರಿ ಪರಿಷತ್ತಿನ ಉಪಾಧ್ಯಕ್ಷರಾಗಿ, ಮಂಗಳೂರು ಮಹಾ ನಗರ ಪಾಲಿಕೆಯ ಉಪ ಮಹಾಪೌರರಾಗಿ ಸೇವೆ ಸಲ್ಲಿಸಿ, ಜನಾನುರಾಗಿಯಾಗಿದ್ದು ಇತ್ತೀಚಿಗೆ ನಿಧನರಾದ ಮೊಹಮ್ಮದ್ ಕುಂಜತ್ ಬೈಲ್ ರವರು ಸರಳ ಸಜ್ಜನಿಕೆಯ ನೇತಾರರಾಗಿ ಸರ್ವ ಮಾನ್ಯರಾಗಿದ್ದರು. ಅವರ ಆಗಲುವಿಕೆಯು ಅತೀವ ದುಃಖವನ್ನುಂಟು ಮಾಡಿದ್ದು ಸಮುದಾಯಕ್ಕೆ ತುಂಬಲಾರದ ನಷ್ಠ ಎಂಬುದಾಗಿ ಅಖಿಲ ಭಾರತ ಬ್ಯಾರಿ ಪರಿಷತ್ತಿನ ಅಧ್ಯಕ್ಷರಾದ ಯು. ಎಚ್. ಖಾಲಿದ್ ಉಜಿರೆ ಅವರು ಹೇಳಿದರು.
ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಹಮ್ಮದ್ ಕುಂಜತ್ ಬೈಲ್ ಅನುಸ್ಮರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಭೆಯಲ್ಲಿ ಪರಿಷತ್ತಿನ ಗೌರವಾಧ್ಯಕ್ಷ ಯೂಸುಫ್ ವಕ್ತಾರ, ಸದಸ್ಯರಾದ ಯಾಕೂಬ್ ಗುರುಪುರ, ಇಬ್ರಾಹೀಂ ಬ್ಯಾರಿ, ಹನೀಫ್ ಬಜಾಲ್, ಅಬ್ದುಲ್ ಖಾದರ್ ಇಡ್ಮ, ,ಅಬ್ದುಲ್ ರಹಿಮಾನ್ , ಅಬೂಬಕ್ಕರ್ ಜಲ್ಲಿ , ಅಬ್ಬಾಸ್ ಬಿಜೈ , ಜಹೀರ್ ಅಬ್ಬಾಸ್ , ಹಮೀದ್ ಕಿನ್ಯ, ಬಷೀರ್ ಮೊಂಟೆಪದವು ,ಹಸನಬ್ಬ ಮೂಡಬಿದ್ರೆ ಮೃತರ ಕೊಡುಗೆಗಳನ್ನು ಸ್ಮರಿಸಿದರು.
ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ನಡುಪದವು ಸ್ವಾಗತಿಸಿದರು. ಕೋಶಾಧಿಕಾರಿ ನಿಸಾರ್ ಮಹಮ್ಮದ್ ವಂದಿಸಿದರು.