ಕಳವು ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಮಂಗಳೂರು, ಮಾ.13: 30 ವರ್ಷಗಳ ಹಿಂದೆ ದಾಖಲಾಗಿದ್ದ ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ತೆಂಕ ಎಡಪದವಿನ ಕೋರಿ ಬೆಟ್ಟು ನಿವಾಸಿ ಲಿಯೋ ರೋಚ್ ಯಾನೆ ವೆನ್ಸೆಸ್ ಲಿಯೋ ರೋಚ್ ಬಂಧಿತ ಆರೋಪಿಯಾಗಿದ್ದಾನೆ.
1991ರ ಫೆ.28ರಂದು ಕಾವೂರು ಗಾಂಧಿನಗರ ಎಂಬಲ್ಲಿರುವ ಸುದರ್ಶನ್ ಫ್ರೆಂಡ್ಸ್ ಕ್ಲಬ್‌ನಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದ್ದ ವಸ್ತುಗಳನ್ನು ಕಳವು ಮಾಡಿದ್ದ ಬಗ್ಗೆ ಚಂದ್ರಶೇಖರ ದೂರು ನೀಡಿದ್ದರು.
ಕಳೆದ 30 ವರ್ಷದಿಂದ ತಲೆಮರಸಿಕೊಂಡಿದ್ದ ಆರೋಪಿಯನ್ನು ಪಜೀರುನಲ್ಲಿರುವ ಆತನ ಮನೆಯ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕಾವೂರು ಠಾಣೆಯ ಎಸ್ಸೈ ಮಲ್ಲಿಕಾರ್ಜುನ ಬಿರಾದಾರ, ಎಚ್‌ಸಿ ಪ್ರಮೋದ್ ಕುಮಾರ್, ಪಿಸಿ ಆನಂದ ಗೋನಾಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Next Story