ಮಂಗಳೂರು: ಚಲಾವಣೆಯಲ್ಲಿಲ್ಲದ ನೋಟುಗಳ ಕಂತೆ ಪತ್ತೆ

ಮಂಗಳೂರು, ಮಾ.13: ನಗರದ ಮೇರಿಹಿಲ್ ಮೈದಾನದಲ್ಲಿ ಚಲಾವಣೆಯಲ್ಲಿಲ್ಲದ 1000 ಹಾಗೂ 500 ರೂ. ಮುಖ ಬೆಲೆಯ ನೋಟುಗಳ ಕಂತೆ ಪತ್ತೆಯಾಗಿದೆ.
ಮೈದಾನದ ಬದಿ ಮಂಗಳವಾರ ಬೆಳಗ್ಗೆ ಚೀಲವೊಂದರಲ್ಲಿ ಇತರ ತ್ಯಾಜ್ಯದ ಜತೆ ನೋಟುಗಳು ಕಂಡು ಬಂದಿದೆ ಎನ್ನಲಾಗಿದೆ. ಆದರೆ ಸಂಜೆಯ ವೇಳೆಗೆ ಈ ನೋಟುಗಳು ನಾಪತ್ತೆಯಾಗಿದ್ದವು. ಯಾರೋ ಅದನ್ನು ಕೊಂಡೊಯ್ದಿರುವ ಸಾಧ್ಯತೆ ಇದೆ. ನೋಟು ಅಮಾನ್ಯಗೊಂಡ ಬಳಿಕ ಮನೆಯಲ್ಲಿ ಉಳಿದಿದ್ದ ಈ ನೋಟುಗಳನ್ನು ತಂದು ಮೈದಾನದ ಬದಿ ಬಿಸಾಡಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Next Story