ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು,ಮಾ.13:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯ ಸಾಮರ್ಥ್ಯಉಪ ಯೋಜನೆಯ ಪಾಲನಾ ಉಪಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ದ.ಕ. ಜಿಲ್ಲೆಯ 5 ಅಂಗನವಾಡಿ/ಕ್ರಷ್‌ನ ಕಾರ್ಯಕರ್ತೆ 1 ಮತ್ತು / ಸಹಾಯಕಿ 4 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ
ಮಂಗಳೂರು ಗ್ರಾಮಾಂತರದ ನಾಗರಕಟ್ಟೆ ಮತ್ತು ಬಬ್ಬುಕಟ್ಟೆ, ಬಂಟ್ವಾಳ ತಾಲೂಕಿನ ಕೈಕುಂಜೆ ಮತ್ತು ಪುತ್ತೂರು ತಾಲೂಕಿನ ನೆಲ್ಲಿಕಟ್ಟೆ ವ್ಯಾಪ್ತಿಯ 18 ರಿಂದ 35 ವರ್ಷದೊಳಗಿನ ಮಹೊಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾರ್ಯಕರ್ತೆಯರ ಹುದ್ದೆಗೆ 5,500 ರೂ. ಹಾಗೂ ಸಹಾಯಕಿಯರ ಹುದ್ದೆಗೆ 3,000 ರೂ. ಗೌರವಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಮಾ. 27ಕೊನೆಯ ದಿನವಾಗಿರುತ್ತದೆ.
ಅಂಗನವಾಡಿ/ಕ್ರಷ್‌ನ ಕಾರ್ಯಕರ್ತೆ ಹುದ್ದೆಗೆ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ/ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿರಬೇಕು ಅಥವಾ ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅಂಗನವಾಡಿ/ಕ್ರಷ್‌ನ ಸಹಾಯಕಿ ಹುದ್ದೆಗೆ 10ನೇ ತರಗತಿ ಪರೀಕ್ಷೆ/7ನೇ ತರಗತಿಯಲ್ಲಿ ಪಾಸಾಗಿರಬೇಕು ಅಥವಾ ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಹೆಚ್ಚಿನ ವಿದ್ಯಾರ್ಹತೆಯನ್ನು ಪರಿಗಣಿಸುವುದಿಲ್ಲ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಆಯಾ ವ್ಯಾಪ್ತಿಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಮಂಗಳೂರು ಗ್ರಾಮಾಂತರ ದೂ:9620636888, ಬಂಟ್ವಾಳ ದೂ:7760729919, ಪುತ್ತೂರು ದೂ:08251-298788, ವಿಟ್ಲ ದೂ:08255- 238080ನ್ನು ಕಚೇರಿಯ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.