ಜನಗಣತಿ ವೇಳೆ ತುಳುವನ್ನು ಮಾತೃಭಾಷೆಯಾಗಿ ದಾಖಲಿಸುವ ನಿಟ್ಟಿನಲ್ಲಿ ಚಳವಳಿ ಅಗತ್ಯ: ಡಾ. ಪುರುಷೋತ್ತಮ ಬಿಳಿಮಲೆ

ಮಂಗಳೂರು,ಮಾ.15: ಪ್ರತಿಯೊಂದು ಭಾಷಾ ಅಕಾಡೆಮಿಗಳಿಗೆ ಅಧ್ಯಕ್ಷರುಗಳಿಗೆ ತಮ್ಮ ಭಾಷೆಗಳನ್ನು ಆಡುವ ಜನಸಂಖ್ಯೆಯ ಬಗ್ಗೆ ಸ್ಪಷ್ಟ ಮಾಹಿತಿ ಇರಬೇಕಾಗಿದೆ. ಈ ನಿಟ್ಟಿನಲ್ಲಿ ಜನಗಣತಿ ವೇಳೆ ಮಾತೃ ಭಾಷೆಯಾಗಿ ತುಳುವನ್ನು ದಾಖಲಿಸುವ ನಿಟ್ಟಿನಲ್ಲಿ ಚಳವಳಿ ಅಗತ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಖಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ನಗರದ ತುಳು ಭವನದಲ್ಲಿ ಶನಿವಾರ ನಡೆದ ಕರ್ನಾಟಕ ತುಳು ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.
ನಾವು ಜನಗಣತಿಯನ್ನು ಗಂಭೀರವಾಗಿ ಪರಿಗಣಿಸದ ಕಾರಣ ನಮಗೆ ಕೆಲವು ಕಾಣಿಸಿಕೊಳ್ಳುತ್ತದೆ. ಯೋಜನೆ ರೂಪಿಸಲು ಜನಗಣತಿ ಅಗತ್ಯ ಎಂದರು. ಮುಂದಿನ 30 ವರ್ಷಗಳಲ್ಲಿ ಜಗತ್ತಿನಲ್ಲಿ ಶೇ 90ರಷ್ಟು ಭಾಷೆಗಳು ಕಡಿಮೆಯಾಗಿ ಈಗ ಶೇ 6ರಷ್ಟು ಮಂದಿ ಮಾತನಾಡುವ 6 ಭಾಷೆಗಳು ಮಾತ್ರ ಉಳಿಯಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಊರಿನ ಹೆಸರುಗಳನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ತುಳು ಅಸ್ಮಿತೆಯ ಹುಡುಕಾಟ ನಡೆಸಿರುವ ವಿದ್ವಾಂಸರನ್ನು ತುಳು ಅಕಾಡೆಮಿ ಗುರುತಿಸಿ ಗೌರವಿಸುತ್ತಿ ರುವುದು ಶ್ಲಾಘನೀಯ ಎಂದರು.
ಪ್ರುಸ್ತುತ ಕಾಲಘಟ್ಟದಲ್ಲಿ ತುಳುವಿನ ಅಸ್ಮಿತೆ ಬೆಳೆಯುತ್ತದಾ ? ಅಥವಾ ಪೆಟ್ಟು ಬಿದ್ದಿದಾ ? ಎನ್ನುವ ಬಗ್ಗೆ ಸಂಶೋಧನೆ ನಡೆಬೇಕಾಗಿದೆ ಎಂದರು.
ಡಾ. ಚಿನ್ನಪ್ಪ ಗೌಡ ಅವರಂತಹವರು ತುಳು ನಾಡಿನ ಚರಿತ್ರೆ ಕಟ್ಟಿದವರು ಎಮದು ಬಣ್ಣಿಸಿದರು.
ಪ್ರಶಸ್ತಿ ವ್ಯಕ್ತಿಗೆ ಯೋಗ್ಯತೆಯ ಮಾನದಂಡವಲ್ಲ. ಆದು ಬರುತ್ತದೆ ಹೋಗುತ್ತದೆ. ಆದರೆ ಅವರು ಮಾಡಿರುವ ಕೆಲಸ ಶಾಸ್ವತವಾಗಿ ಉಳಿಯುತ್ತದೆ ಎಂದರು.
ಹಿಂದೆ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜೇಪೇಯಿ ಪ್ರಧಾನಿಯಾಗಿದ್ದಾಗ 4 ಭಾಷೆಗಳನ್ನು 8ನೇ ಪರಿಚ್ಚೇದಕ್ಕೆ ಸೇರಿಸಲಾಗಿತ್ತು. ಪಟ್ಟಿಯಲ್ಲಿದ್ದ ತುಳುವಿಗೆ ಈ ಸ್ಥಾನಮಾನ ಕೈ ತಪ್ಪಿತ್ತು. ಈಗ ಸುಮಾರು 99ಭಾಷೆಗಳು 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಲು ಉತ್ಸುಕವಾಗಿದೆ. ಇದರಿಂದಾಗಿ ತುಳುವಿಗೆ ಕಠಿಣ ಸವಾಲು ಎದುರಾಗಿದೆ ಎಂದು ಹೇಳಿದರು.
2022ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ರಘಪತಿ ಕೆಮ್ತೂರು (ಸಂಶೋಧನೆ ಹಾಗೂ ಸಾಹಿತ್ಯ ),ರತ್ನಮಾಲ ಪುರಂದರ ( ತುಳು ನಾಟಕ ಸಿನಿಮಾ ) , ಪ್ರಭಾಕರ ಶೇರಿಗಾರ ಉಡುಪಿ ( ಜಾನಪದ ಕ್ಷೇತ್ರದ ಪ್ರಶಸ್ತಿ), 2023ನೇ ಸಾಲಿನ ಪ್ರಶಸ್ತಿ ಸಿಮಂತೂರು ಚಂದ್ರಹಾಸ ಸುವರ್ಣ ಮುಂಬೈ(ತುಳು ಸಾಹಿತ್ಯ ಕ್ಷೇತ್ರದ ಪ್ರಶಸ್ತಿ), ನೆಕ್ಕಿದ ಪುಣಿ ಗೋಪಾಲಕೃಷ್ಣ ಬೆಂಗಳೂರು (ತುಳು ನಾಟಕ) , ಲಕ್ಷ್ಮಣ ಕಾಂತ ಕಣಂತೂರು (ಜಾನಪದ), 2024ನೇ ಸಾಲಿನ ಸಾಹಿತ್ಯ ಕ್ಷೇತ್ರದ ಪ್ರಶಸ್ತಿ ಯಶವಂತ ಬೋಳೂರು ( ತುಳು ಸಾಹಿತ್ಯ), ಸರೋಜಿನಿ ಎಸ್. ಶೆಟ್ಟಿ(ತುಳು ನಾಟಕ, ಸಿನಿಮಾ ), ಬೆಳ್ತಂಗಡಿಯ ಬಿ.ಕೆ. ದೇವರಾವ್ (ಕೃಷಿ ಜನಪದ ), ಪುಸ್ತಕ ಪ್ರಶಸ್ತಿ ಪುರಸ್ಕೃತರಾದ ರಾಜೇಶ್ ಶೆಟ್ಟಿ ದೋಟ, ರಾಜಶ್ರೀ ಟಿ ರೈ ಪೆರ್ಲ, ರಘ ಇಡ್ಕಿದು, ಕುಶಾಲಾಕ್ಷಿ ವಿ ಕುಲಾಲ್ , ದತ್ತಿನಿಧಿ ಪುಸ್ತಕ ಪ್ರಶಸ್ತಿ ಪುರಸ್ಕೃತರಾದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಯಶೋದ ಮೋಹನ್, ಡಾ.ಚಿನ್ನಪ್ಪ ಗೌಡ, ಡಾ.ವಿ.ಕೆ.ಯಾದವ್ ಮತ್ತು ರಘನಾಥ ವರ್ಕಾಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೂಡಬಿದ್ರೆ ಶಾಸಕ ಉಮನಾಥ ಎ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಶುಭ ಹಾರೈಸಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು ಎಚ್, ತುಳು ಸಂಶೋಧಕಿ ಡಾ. ಇಂದಿರಾ ಹೆಗ್ಡೆ, ರಿಜಿಸ್ಟ್ರಾರ್ ಪೂರ್ಣಿಮಾ , ಡಾ.ಅಮರಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ಸದಸ್ಯ ಸಂಚಾಲಕರಾದ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕುಂಬ್ರ ದುರ್ಗಾಪ್ರಸಾದ್ ರೈ, ಅಕ್ಷಯ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.