ಮಹಮ್ಮದ್ ಕುಂಜತ್ತಬೈಲ್‌ಗೆ ನುಡಿನಮನ

ಮಂಗಳೂರು: ಇತ್ತೀಚೆಗೆ ನಿಧನರಾದ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಕೆ.ಮಹಮ್ಮದ್ ಕುಂಜತ್ತಬೈಲು ಅವರಿಗೆ ನುಡಿನಮನ ಕಾರ್ಯಕ್ರಮ ದ.ಕ. ಜಿಲ್ಲಾ ಅಹಿಂದಾ ಜನ ಚಳವಳಿ ನೇತೃತ್ವದಲ್ಲಿ ಸೋಮವಾರ ನಡೆಯಿತು.
ದ.ಕ. ಜಿಲ್ಲಾ ಅಹಿಂದಾ ಜನ ಚಳವಳಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಹಿಂದ ಅಧ್ಯಕ್ಷ ಭರತೇಶ್ ಅಮೀನ್ ಬಜಾಲ್ ವಹಿಸಿದ್ದರು.
ಸಭೆಯಲ್ಲಿ ವಕೀಲರಾದ ಬಿ.ಎ. ಮುಹಮ್ಮದ್ ಹನೀಫ್, ಮಾಜಿ ಮೇಯರ್ ಅಶ್ರಫ್, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಪ್ರಮುಖರಾದ ಪುಂಡರೀಕಾಕ್ಷ, ಇಬ್ರಾಹಿಂ ನಡುಪದವು, ರಾಕೇಶ್ ಎಸ್‌ಎಸ್ ಮತ್ತಿತರರು ನುಡಿನಮನ ಸಲ್ಲಿಸಿದರು. ಜಿಲ್ಲಾ ಅಹಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್ ಸ್ವಾಗತಿಸಿ, ವಂದಿಸಿದರು.
Next Story