Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಉಪ್ಪಿನಂಗಡಿ| ವಿಜಯ- ವಿಕ್ರಮ ಜೋಡುಕರೆ...

ಉಪ್ಪಿನಂಗಡಿ| ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಾರೋಪ ಸಮಾರಂಭ

ವಾರ್ತಾಭಾರತಿವಾರ್ತಾಭಾರತಿ23 March 2025 9:04 PM IST
share
ಉಪ್ಪಿನಂಗಡಿ| ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಾರೋಪ ಸಮಾರಂಭ

ಉಪ್ಪಿನಂಗಡಿ: ಪರುಷ ಮಣಿ ಎಂಬುದಕ್ಕೆ ಕಬ್ಬಿಣವನ್ನು ತಾಗಿಸಿದರೂ ಅದು ಚಿನ್ನವಾಗುತ್ತದೆಯಂತೆ. ಹಾಗೆನೇ ಶಾಸಕರಾದ ಅಶೋಕ್ ರೈಯವರ ಕೈಗೆ ಪರುಷ ಮಣಿಯ ಸ್ಪರ್ಶ ಇದೆ. ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಎಲ್ಲ ಕೆಲಸವೂ ಯಶಸ್ವಿಯಾಗಿ ಸಾಗುತ್ತದೆ. ತೀವ್ರ ಪರಿಶ್ರಮ, ಹಿಡಿದ ಕೆಲಸವನ್ನು ಪೂರ್ಣಗೊಳಿಸದೇ ವಿರಮಿಸೋದಿಲ್ಲ ಅನ್ನೋ ಹಠವೇ ಇದಕ್ಕೆ ಕಾರಣ ಎಂದು ಖ್ಯಾತ ನ್ಯಾಯವಾದಿ, ಕರ್ನಾಟಕ ರಾಜ್ಯ ಕಾನೂನು ಸೇವಾ ಬೆಂಗಳೂರು ಇದರ ಮಾಜಿ ಸದಸ್ಯರಾದ ಮಹೇಶ್ ಕಜೆ ತಿಳಿಸಿದರು.

ಇಲ್ಲಿನ ಕೂಟೇಲು ಬಳಿಯ ದಡ್ಡುವಿನಲ್ಲಿ ನಡೆದ ವಿಜಯ- ವಿಕ್ರಮ ಜೋಡುಕರೆ ಕಂಬಳದ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಚಕ್ರವರ್ತಿ ಅಶೋಕನಲ್ಲಿ ಯಾವೆಲ್ಲಾ ಗುಣಗಳಿತ್ತೋ ಅದೇ ಗುಣಗಳು ಅಶೋಕ್ ಕುಮಾರ್ ರೈ ಅವರಲ್ಲಿದೆ. ಧಾರ್ಮಿಕ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ , ರಾಜಕೀಯ ಕ್ಷೇತ್ರದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರಲ್ಲದೆ, ಹಗಲು ರಾತ್ರಿಯೆನ್ನದೇ, ಬಿಸಿಲೆನ್ನು ಲೆಕ್ಕಿಸದೇ ಕಂಬಳ ಕರೆಯ ಬಳಿ ನಿಂತು ಕಂಬಳವನ್ನು ವೀಕ್ಷಿಸುವ ಕಂಬಳಾಭಿಮಾನಿಗಳಿಂದ ಕಂಬಳ ಬೆಳೆಯಲು ಕಾರಣವಾಗಿದೆ ಎಂದರು.

ಮಹಿಳಾ ಕಾಂಗ್ರೆಸ್ ವಕ್ತಾರೆ ಚಂದ್ರಪ್ರಭ ಮಾತನಾಡಿ, ಕಂಬಳವನ್ನು ಒಮ್ಮೆ ನೋಡಿದಾಗ ಮತ್ತೆ ಆ ಕ್ರೀಡೆಯೂ ಎಂದೆಂದಿಗೂ ನಮ್ಮನ್ನು ಆಕರ್ಷಿಸುತ್ತದೆ. ಶಾಸಕರಾದ ಅಶೋಕ್ ಕುಮಾರ್ ರೈವರು ಅಭಿವೃದ್ಧಿ ಶೀಲ ಚಿಂತನೆಯುಳ್ಳವರಾಗಿದ್ದು, ಅಭಿವೃದ್ಧಿಯೊಂದಿಗೆ ಯಾವುದೇ ರಾಜಕೀಯ ತಾರತಮ್ಯ ಮಾಡದೇ ಎಲ್ಲ ಜನರ ಕೆಲಸಗಳನ್ನು ಮಾಡಿಕೊಡುತ್ತಾರೆ. ಸೋಮವಾರ ದಿನ ಅವರು ಕಚೇರಿಯಲ್ಲಿ ಇರುವ ಜನಜಂಗುಳಿಯನ್ನು ನೋಡಿದರೆ ಅದು ಅರ್ಥವಾಗುತ್ತದೆ ಎಂದರು.

ಕಂಬಳದ ಪ್ರಧಾನ ತೀರ್ಪುಗಾರ ಎಂ. ರಾಜೀವ ಶೆಟ್ಟಿ ಎಡ್ತೂರು ಮಾತನಾಡಿ, ಉಪ್ಪಿನಂಗಡಿ ಕಂಬಳ ನಿಂತಾಗ ಅಶೋಕ್ ರೈಯವರನ್ನು ಕರೆ ತಂದು ಆ ಕಂಬಳವನ್ನು ಆರಂಭಿಸಲಾಯಿತು. ಈ ಮೂಲಕ ಕಂಬಳ ಕ್ಷೇತ್ರಕ್ಕೆ ಒಂದು ಮುತ್ತನ್ನು ತರುವ ಕೆಲಸವಾಗಿದೆ. ಕಂಬಳಕ್ಕೆ ಪೇಟಾದವರು ತೊಂದರೆ ಕೊಟ್ಟಾಗ ಮೊದಲಾಗಿ ಕಾನೂನು ಹೋರಾಟಕ್ಕೆ ಇಳಿದದ್ದು ಅಶೋಕ್ ಕುಮಾರ್ ರೈಯವರು. ಇಂದಿಗೂ ಕಂಬಳದ ಉಳಿವಿಗಾಗಿ ಅವರ ಹೋರಾಟ ಮುಂದುವರಿದಿದೆ. ಅವರ ಮೂಲ ಪ್ರಯತ್ನದಿಂದಾಗಿಯೇ ಇಂದು ಕಂಬಳವು ನಡೆಯುವಂತಾಗಿದೆ ಎಂದರು.

ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಠಾಣಾ ವೃತ್ತನಿರೀಕ್ಷಕರಾದ ರವಿ ಬಿ.ಎಸ್., ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ ಶುಭ ಹಾರೈಸಿದರು.

ವಿಜೇತ ಕೋಣಗಳ ಮಾಲಕರಿಗೆ ವಿಜಯ- ವಿಕ್ರಮ ಟ್ರೋಫಿ ಹಾಗೂ ಚಿನ್ನ ನೀಡಿ ಗೌರವಿಸಲಾಯಿತು. ವಿಜೇತ ಕೋಣಗಳನ್ನು ಓಡಿಸಿದವರಿಗೂ ಟ್ರೋಫಿಯನ್ನು ನೀಡಲಾಯಿತು. ವಿಶೇಷವೆಂಬಂತೆ ಈ ಬಾರಿ ವಿಜೇತ ಕೋಣಗಳನ್ನು ಬಿಡುವ ಒಂದು ಜೊತೆ ಕೋಣದ ಎರಡು ರಕ್ಷಕರುಗಳಂತೆ ಎಲ್ಲರಿಗೂ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ, ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷರಾದ ಜಯ ಪ್ರಕಾಶ್ ಬದಿನಾರು, ಉದ್ಯಮಿಗಳಾದ ನಿಹಾಲ್ ಶೆಟ್ಟಿ, ರಾಜೇಶ್ ಶೆಟ್ಟಿ, ಕಂಬಳ ಸಮಿತಿಯ ಉಪಾಧ್ಯಕ್ಷ ಸುದರ್ಶನ್ ನಾಯ್ಕ್ ಕಂಪ, ಸದಸ್ಯ ರಂಜಿತ್ ಬಂಗೇರ, ಪ್ರಮುಖರಾದ ವಿಕ್ರಂ ಶೆಟ್ಟಿ ಅಂತರ, ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್ ಪದ್ಮವಿದ್ಯಾ, ನಟೇಶ್ ಪೂಜಾರಿ, ವಿಠಲ ಶೆಟ್ಟಿ ಕೊಲ್ಲೊಟ್ಟು, ರಾಮಚಂದ್ರ ಮಣಿಯಾಣಿ, ಜಗನ್ನಾಥ ಶೆಟ್ಟಿ ನಡುಮನೆ, ಕಾರ್ಯದರ್ಶಿಗಳಾದ ಶಿವರಾಮ ಶೆಟ್ಟಿ ಗೋಳ್ತಮಜಲು, ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಎಸ್. ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣ ಪ್ರಸಾದ್ ಬೊಳ್ಳಾವು, ದಿಲೀಪ್ ಶೆಟ್ಟಿ ಕರಾಯ, ವಿಜಯ ಪೂಜಾರಿ ಚೀಮುಳ್ಳು, ಸಹ ಸಂಚಾಲಕರಾದ ಕುಮಾರನಾಥ ಪಲ್ಲತ್ತಾರು, ಸಮಿತಿಯ ಪದಾಧಿಕಾರಿಗಳಾದ ರಾಕೇಶ್ ಶೆಟ್ಟಿ ಕೆಮ್ಮಾರ, ರಾಘವೇಂದ್ರ ನಾಯಕ್ ನಟ್ಟಿಬೈಲು, ರಂಜೀತ್ ಬಂಗೇರ, ಅಬ್ದುಲ್ ಖಾದರ್, ಮಹಾಲಿಂಗ ಕಜೆಕ್ಕಾರು, ಭಾರತಿ ಕಜೆಕ್ಕಾರು, ಪ್ರಜ್ವಲ್ ರೈ, ಜಗದೀಶ್ ಕುಮಾರ್ ಪರಕಜೆ ಮತ್ತಿತರರು ಉಪಸ್ಥಿತರಿದ್ದರು.

ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಕಂಬಳ ಸಮಿತಿಯ ಗೌರವ ಸಲಹೆಗಾರ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಕೂಟದಲ್ಲಿ 131 ಜೊತೆ ಕೋಣಗಳು ಭಾಗವಹಿಸಿದವು.

ಕನೆ ಹಲಗೆ: 07 ಜೊತೆ

ಅಡ್ಡಹಲಗೆ: 04 ಜೊತೆ

ಹಗ್ಗ ಹಿರಿಯ: 10 ಜೊತೆ

ನೇಗಿಲು ಹಿರಿಯ: 23 ಜೊತೆ

ಹಗ್ಗ ಕಿರಿಯ: 15 ಜೊತೆ

ನೇಗಿಲು ಕಿರಿಯ: 72 ಜೊತೆ

ಕಂಬಳದ ಫಲಿತಾಂಶ

ಕನೆ ಹಲಗೆ:

(7.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ದ್ವಿತೀಯ: ನಿಡ್ಡೋಡಿ ಕಾನ ರಾಮ ಸುವರ್ಣ

ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಅಡ್ಡ ಹಲಗೆ:

ಪ್ರಥಮ: ನಾರಾವಿ ಯುವರಾಜ್ ಜೈನ್ (11.68)

ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ (12.41)

ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್

ಹಗ್ಗ ಹಿರಿಯ:

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಸಿ" (11.52)

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಎ"

ಓಡಿಸಿದವರು: ರೆಂಜಾಳ ಪಂಜಾಳ ಸಂದೇಶ್ ಶೆಟ್ಟಿ

ಹಗ್ಗ ಕಿರಿಯ:

ಪ್ರಥಮ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ "ಬಿ" (11.52)

ಓಡಿಸಿದವರು: ಬಾರಾಡಿ ನತೇಶ್

ದ್ವಿತೀಯ: 80 ಬಡಗು ಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ "ಬಿ" (11.98)

ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ನೇಗಿಲು ಹಿರಿಯ:

ಪ್ರಥಮ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (11.37)

ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಬೋಳದ ಗುತ್ತು ಸತೀಶ್ ಶೆಟ್ಟಿ "ಬಿ" (11.92)

ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ನೇಗಿಲು ಕಿರಿಯ:

ಪ್ರಥಮ: ಮಿಜಾರು ಹರಿಮೀನಾಕ್ಷಿ ದೋಟ ಹರಿಯಪ್ಪ ಶೆಟ್ಟಿ "ಎ" (11.80)

ಓಡಿಸಿದವರು: ಪಟ್ಟೆ ಗುರುಚರಣ್

ದ್ವಿತೀಯ: ಮಿಜಾರ್ ಹರಿಮೀನಾಕ್ಷಿ ದೋಟ ಹರಿಯಪ್ಪ ಶೆಟ್ಟಿ "ಬಿ" (11.49)

ಓಡಿಸಿದವರು: ಪಟ್ಟೆ ಗುರುಚರಣ್

ಉಪ್ಪಿನಂಗಡಿಯ ಕಂಬಳದಲ್ಲಿ ಕನೆ ಹಲಗೆ ವಿಭಾಗದಲ್ಲಿ ಏಳೂವರೆ ಕೋಲು ನಿಶಾನಿಗೆ ಹಾಗೂ ಆರೂವರೆ ಕೋಲು ನಿಶಾನಿಗೆ ಕೋಣಗಳು ನೀರು ಹಾರಿಸಿರುವುದು ವಿಶೇಷವಾಗಿತ್ತು.









share
ವಾರ್ತಾಭಾರತಿ
ವಾರ್ತಾಭಾರತಿ
Next Story
X