ಮೇಲಂಗಡಿ: ʼರಾತೀಬ್ ಕೊಟ್ಟಿಙ್ಯʼ ಉದ್ಘಾಟನೆ

ಉಳ್ಳಾಲ : ಧಾರ್ಮಿಕ ಕಾರ್ಯಕ್ರಮಗಳು ನಮಗೆ ಅಗತ್ಯ.ಇದರಿಂದ ಹಲವು ವಿಚಾರಗಳು ತಿಳಿದು ಕೊಳ್ಳಲು ಸಾಧ್ಯ ಆಗುತ್ತದೆ. ಆದರೆ ಕಾರ್ಯಕ್ರಮಗಳು ಇಸ್ಲಾಮಿನ ಚೌಕಟ್ಟು ಮೀರಿ ಹೋಗಬಾರದು ಎಂದು ಸಯ್ಯದುಲ್ ಝೈನುಲ್ ಆಬಿದೀನ್ ಜಿಪ್ರಿ ತಂಙಳ್ ಕರೆ ನೀಡಿದರು.
ಅವರು ಮುಹಿಯುದ್ದೀನ್ ಜುಮಾ ಮಸೀದಿ ( ಹೊಸಹಳ್ಳಿ) ಮೇಲಂಗಡಿ ಇದರ ಆಶ್ರಯದಲ್ಲಿ 94ನೇ ರಾತೀಬ್ ನೇರ್ಚೆ ಕಾರ್ಯಕ್ರಮ ಪ್ರಯುಕ್ತ ರಾತೀಬ್ ಕೊಟ್ಟಿಙ್ಯ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು ವಹಿಸಿದ್ದರು.
ಇದೇ ವೇಳೆ ನಡೆದ ನೂರೇ ಅಜ್ಮೀರ್ ಕಾರ್ಯಕ್ರಮ ದ ನೇತೃತ್ವವನ್ನು ವಹಿಸಿದ್ದ ವಲಿಯುದ್ದೀನ್ ಫೈಝಿ ಧಾರ್ಮಿಕ ಉಪನ್ಯಾಸ ನೀಡಿದರು. ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಅನಸ್ ಅಝ್ ಅರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ದರ್ಗಾ ಮಾಜಿ ಅಧ್ಯಕ್ಷರಾದ ಅಬ್ದುಲ್ ರಶೀದ್, ಯು.ಎಸ್ .ಹಂಝ, ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹಾ ಹಾಜಿ, ಮೇಲಂಗಡಿ ಎಂಜೆಎಂ ಮಸೀದಿ ಮಾಜಿ ಅಧ್ಯಕ್ಷ ರಾದ ಫಾರೂಕ್ ಉಳ್ಳಾಲ್,ಝೈನುದ್ದೀನ್ ಸೀದಿಯಬ್ಬ , ಹಾಜಿ ಅಬ್ಬಾಸ್ ಅಬ್ದುಲ್ಲಾ,ಕೌನ್ಸಿಲರ್ ಅಬ್ದುಲ್ ಜಬ್ಬಾರ್, ಶಂಶುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು.ಟಿ.ಮೊಹಮ್ಮದ್, ಯು.ಕೆ.ಯೂಸುಫ್, ದರ್ಗಾ ಸಮಿತಿ ಸದಸ್ಯ ಇಸ್ಹಾಕ್, ಹಾಜಿ ಅಹ್ಮದ್ ಬಾವ, ಪೇಟೆ ಜುಮಾ ಮಸೀದಿ ಅಧ್ಯಕ್ಷ ಮೊಯ್ದಿನ್ ಕುಂಞಿ , ಮೇಲಂಗಡಿ ಎಂಜೆಎಂ ಮಸೀದಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೇಲಂಗಡಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಳೆ ಕೋಟೆ, ಕಾರ್ಯದರ್ಶಿ ಮೊಯ್ಯದ್ದೀನ್ ಮೇಲಂಗಡಿ, ಕೋಶಾಧಿ ಕಾರಿ ಅಬ್ದುಲ್ ರಶೀದ್ ಮಾಸ್ತಿಕಟ್ಟೆ, ಅಬ್ದುಲ್ ಸತ್ತಾರ್ ಉಸ್ತಾದ್, ಅಶ್ರಫ್ ಸಖಾಫಿ, ಉಸ್ಮಾನ್ ಕಲ್ಲಾಪು ಮತ್ತಿತರರು ಉಪಸ್ಥಿತರಿದ್ದರು. ಮೇಲಂಗಡಿ ಎಂಜೆಎಂ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಸ್ವಾಗತಿಸಿದರು. ಸಲಾಂ ಮದನಿ ಕಾರ್ಯಕ್ರಮ ನಿರೂಪಿಸಿದರು.