ಗ್ಯಾಂಗ್ ರೇಪ್ ಪ್ರಕರಣ: ಆರೋಪಿ ಮಿಥುನ್ ನ ಮನೆಯಲ್ಲಿ ಮಹಜರು; ಕಾರು ವಶಕ್ಕೆ

ಉಳ್ಳಾಲ: ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಆರೋಪದಡಿ ಪೊಲೀಸ್ ಕಸ್ಟಡಿ ಯಲ್ಲಿ ಇರುವ ಬಂಧಿತ ಮೂವರು ಆರೋಪಿಗಳ ತನಿಖೆ ಮುಂದುವರಿ ದಿದ್ದು, ಮೊನ್ನೆ ಸ್ಥಳ ಮೆಹಜರು ನಡೆಸಿದ್ದಾರೆ.
ಇಂದು ಆರೋಪಿ ಮಿಥುನ್ ನಾ ಕುಂಪಲ ದಲ್ಲಿರುವ ಮನೆಗೆ ಆರೋಪಿ ಜೊತೆ ಭೇಟಿ ನೀಡಿದ ಉಳ್ಳಾಲ ಪೊಲೀಸರು ಮಹಜರು ನಡೆಸಿದ್ದು, ಮನೆಯಲ್ಲಿದ್ದ ಕಪಾಟು, ಬಟ್ಟೆ ಗಳನ್ನು ಪರಿಶೀಲನೆ ನಡೆಸಿದರು.
ಆರೋಪಿಗಳು ಈ ಕೃತ್ಯ ಕ್ಕೆ ಕಾರು ಮತ್ತು ಆಟೋ ಎರಡನ್ನು ಬಳಸಿಕೊಂಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿಸಿದ್ದು, ಕೃತ್ಯಕ್ಕೆ ಬಳಸಿದ ಕಾರು ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯುವತಿ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ವೈದ್ಯಕೀಯ ವರದಿ ಇನ್ನೂ ಪೊಲೀಸರ ಕೈಸೇರಿಲ್ಲ. ಯುವತಿ ಗೆ ಚಿಕಿತ್ಸೆ ಮುಂದುವರಿದಿದ್ದು.ಆಕೆಯ ಮೇಲೆ ಗಾಯದ ಗುರುತು ಇರುವ ಕಾರಣ ಅತ್ಯಾಚಾರ ನಡೆದಿರಬೇಕು ಎಂಬ ಶಂಕೆ ಪೊಲೀಸರಲ್ಲಿ ವ್ಯಕ್ತವಾಗಿದೆ. ಈ ಬಗ್ಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ಆರೋಪಿಗಳ ತನಿಖೆ ಮುಂದುವರಿಸಿದ್ದಾರೆ. ಕಸ್ಟಡಿಗೆ ಪಡೆದು ಕೊಂಡಿರುವ ಮೂವರು ಆರೋಪಿಗಳನ್ನು ಇದೇ ತಿಂಗಳು 25 ರಂದು ಕೋರ್ಟ್ ಗೆ ಮತ್ತೆ ಹಾಜರು ಪಡಿಸಬೇಕಾದ ಹಿನ್ನೆಲೆಯಲ್ಲಿ ಈ ದಿನಾಂಕದ ಮೊದಲೇ ತನಿಖೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಅಗತ್ಯ ಬಂದಲ್ಲಿ ಇನ್ನೊಂದು ಬಾರಿ ಸ್ಥಳ ಮಹಜರು ನಡೆಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.







