ರಂಗಸ್ವರೂಪ ಪ್ರಶಸ್ತಿ ಪ್ರದಾನ - ಬೇಸಿಗೆ ಶಿಬಿರ ಸಮಾರೋಪ

ಮಂಗಳೂರು, ಎ.20: ರಂಗ ಸ್ವರೂಪ (ರಿ) ಇದರ 20ನೇ ವರ್ಷದ 4 ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ರಂಗಸ್ವರೂಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮರಕಡ ಕುಂಜತ್ತಬೈಲ್ ಸರಕಾರಿ ಶಾಲೆಯಲ್ಲಿ ರವಿವಾರ ನಡೆಯಿತು.
ದ.ಕ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗೋವಿಂದ ಮಡಿವಾಳ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈಗಿನ ಕಾಲದಲ್ಲಿ ಪುಟಾಣಿ ಮಕ್ಕಳಿಗೆ ಬೋಧನೆ ಮಾಡುವುದು ಸವಾಲಾ ಗಿದೆ. ದ.ಕ ಜಿಲ್ಲೆಯಲ್ಲಿ 1,772 ಶಾಲೆಗಳಿವೆ. ರಂಗ ಸ್ವರೂಪ ಸಂಸ್ಥೆಯೊಂದಿಗೆ ಕೈಜೋಡಿಸಿ ಮರಕಡ ಶಾಲೆ ಆಯೋಜಿಸಿದ ಬೇಸಿಗೆ ಶಿಬಿರ ಇತರ ಶಾಲೆಗಳೆ ಮಾದರಿಯಾಗಿದೆ ಎಂದರು.
ಈ ಸಂದರ್ಭ ಜಾನಪದ ವಿದ್ವಾಂಸ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ.ಕೆ ಪೇಜಾವರ ಅವರಿಗೆ ರಂಗಸ್ವರೂಪ-2025 ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಂಗ ಸ್ವರೂಪ ಗೌರವ ಸಲಹೆಗಾರ ಎನ್. ಶಿವಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ರಂಗ ಸ್ವರೂಪದ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತಬೈಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮನಪಾ ಮಾಜಿ ಸದಸ್ಯ ಶರತ್ ಕುಮಾರ್, ಮರಕಡ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎ.ನೇತ್ರಾವತಿ ಅತಿಥಿಗಳಾಗಿದ್ದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ಅವರನ್ನು ಸನ್ಮಾನಿಸಲಾಯಿತು. ಶಿಬಿರ ನಿರ್ದೇಶಕ ಝುಬೇರ್ ಖಾನ್ ಕುಡ್ಲ ಸ್ವಾಗತಿಸಿದರು. ಸದಸ್ಯರಾದ ತಸ್ಲೀಮಾ ಬಾನು, ಅನೀಸಾ ಸವಾದ್ ಪ್ರಶಸ್ತಿ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ವಂದಿಸಿದರು. ಗೌರವಾಧ್ಯಕ್ಷ ಪ್ರೇಮನಾಥ್ ಮರ್ಣೆ ಕಾರ್ಯಕ್ರಮ ನಿರೂಪಿಸಿದರು.







