ಬಟ್ಲಡ್ಕ ಉರೂಸ್ ಸಮಾರೋಪ

ಉಪ್ಪಿನಂಗಡಿ, ಎ.21: ಬಂದಾರು ಸಮೀಪದ ಬಟ್ಲಡ್ಕ ಜುಮಾ ಮಸೀದಿಯ ಆವರಣದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರೋಪವು ರವಿವಾರ ರಾತ್ರಿ ನಡೆಯಿತು.
ಮುಳ್ಳೂರುಕೆರೆ ಮುಹಮ್ಮದ್ ಅಲಿ ಸಖಾಫಿ ಮುಖ್ಯ ಪ್ರಭಾಷಣಗೈದರು. ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಬಂದಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಗೌರವ ಅಧ್ಯಕ್ಷ ಶೈಖುನಾ ಸಾದಾತ್ ತಂಳ್ ಉದ್ಘಾಟಿಸಿದರು. ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ಸ್ವಾಗತಿಸಿದರು.
ಕೇರಳ ಪೂನೂರಿನ ಮರ್ಕಸ್ ಗಾರ್ಡನ್‌ನ ಜನರಲ್ ಮ್ಯಾನೇಜರ್ ಅಬೂಸ್ವಾಲಿಹ್ ಸಖಾಫಿ ಪ್ರಾಸ್ತ್ತಾವಿಕ ಭಾಷಣವಾಗಿ ನೆರವೇರಿಸಿದರು. ಖತೀಬ್ ಮುಹಮ್ಮದ್ ಆರಿಫ್ ಮದನಿ ಮತ್ತಿತರರು ಉಪಸ್ಥಿತರಿದ್ದರು. ರಹೀಂ ಬಟ್ಲಡ್ಕ ವಂದಿಸಿದರು.
Next Story