ಮುಡಿಪುನಲ್ಲಿ ಜಲ ಜಾಗೃತಿ ಕಾರ್ಯಕ್ರಮ

ಕೊಣಾಜೆ: ಜೀವ ಜಲದ ಅರಿವಿಗಾಗಿ, ನೆಲ ಜಲ ಜಂಗಲ್ ನ ಉಳಿವುಗಾಗಿ ಗಿಡ ಬೆಳೆಸುವ, ಮರ ಉಳಿ ಸುವ, ಇಂಗು ಗುಂಡಿ ನಿರ್ಮಿಸುವ, ನೀರು ಇಂಗಿಸಿ ಬರ ತಡೆಯುವ ಕಾರ್ಯಕ್ಕೆ ಪ್ರೆರಣೆ ನೀಡುವ ಜಲ ಜಾಗೃತಿ ಕಾರ್ಯಕ್ರಮ ಜನ ಶಿಕ್ಷಣ ಟ್ರಸ್ಟ ನಲ್ಲಿ ನಡೆಯುತು.
ಸ್ಮೈಲ್ ಟ್ರಸ್ಟ್, ಅಪ್ನಾದೇಶ್ ಬಳಗ, ಪಿ. ಎ. ಇಂಜಿನಿಯರಿಂಗ್ ಕಾಲೇಜ್ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಫ್ರೊ.ಸಿ.ವಿ. ಪೂಜಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಕೃತಿ ಪರಿಸರದಲ್ಲಿ ಜೀವ ಜಲದ ಮಹತ್ವದ ಕುರಿತು ಮಾಹಿತಿ ನೀಡಿ ಮಾನವ ನಿರ್ಮಿತ ಮಾಲಿನ್ಯದಿಂದ ಆಗುತ್ತಿರುವ ಅನಾಹುತಗಳನ್ನು ತಿಳಿಸಿ ಮಳೆ ನೀರು ಕೊಯಿಲು ಜಲ ಮರುಪೂರಣದ ಬಗ್ಗೆ ವಿವರಿಸಿದರು.
ಜೀವ ಜಲ ಪ್ರಕೃತಿ ಮಾತೆಯ ಪ್ರಸಾದ ಇದನ್ನು ಪೋಲು ಮಾಡುವುದು ಪಾಪವೆಂದು ನರೇಗಾ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ತಿಳಿಸಿ ಪ್ರತಿ ಮನೆಗೊಂದು ಮಳೆ ನೀರು ಸಂಗ್ರಹ ಘಟಕ ನಿರ್ಮಿಸಿಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದೆಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಮೈಲ್ ಸ್ಕಿಲ್ ಸ್ಕೂಲ್ ನ ವಿದ್ಯಾರ್ಥಿನಿಯರ, ಶಿಕ್ಷಕಿಯರ 30 ಕುಟುಂಬಗಳ 25 ಮನೆಗಳಲ್ಲಿ ಕುಡಿಯುವ ನೀರಿನ ಬಾವಿ ಹೊಂದಿದ್ದು ಉಳಿದ ಕುಟುಂಬಗಳು ಬಾವಿ ಅಥವಾ ಮಳೆ ನೀರು ಘಟಕ ಗಳನ್ನು ನಿರ್ಮಿಸಿ ಕೊಳ್ಳಲು ಸಂಕಲ್ಪ ಮಾಡಿದರು.







