ದ.ಕ. ಜಿಲ್ಲೆಯ ವಿವಿಧ ಕಡೆ ಗಾಳಿ ಮಳೆಗೆ ಹಾನಿ

ಮಂಗಳೂರು: ಮೂಡುಬಿದಿರೆ ಹೊಸಂಗಡಿ ಗ್ರಾಮದಲ್ಲಿ ಇಂದು ಬಂದಿರುವ ಬೀಕರ ಗಾಳಿ ಮಳೆಗೆ ದೇರಾರ್ ಶಾರದಾ ಪೂಜಾರಿ ಎಂಬವರ ಮನೆಯ ಮೇಲೆ ತೆoಗಿನ ಮರ ಬಿದ್ದು ಮನೆ ಬಹುತೇಕ ಹಾನಿಗೋಳಾಗಿದ್ದು ಅಪಾರ ನಷ್ಟ ವಾಗಿರುತ್ತದೆ.
ಹೊಸಂಗಡಿ ಫ್ರೆಂಡ್ಸ್ ಕ್ಲಬ್ಬಿನ ಸದಸ್ಯರು ಭೇಟಿ ನೀಡಿ ಒಬ್ಬಂಟಿಯಾಗಿರುವ ಆ ತಾಯಿಗೆ ಧೈರ್ಯ ತುಂಬಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸೆಕ್ರೆಟರಿ ಭೇಟಿ ನೀಡಿ ಪಂಚಾಯತ್ ನಿಂದ ಸಾಧ್ಯವಾದಷ್ಟು ನೆರವನ್ನು ನೀಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೆoದ್ರ ಕುಮಾರ್ ಹಾಗು ಕ್ಲಬಿನ ಸದಸ್ಯರು ಗಳಾದ ಚಂದ್ರಶೇಖರ ಚಂದ್ರಕಾಂತ್, ಕೇಶವ ದಿನೇಶ್ ಭರತ್ ಸುದರ್ಶನ್ ಪಿಲಂಬು ಇವರೆಲ್ಲ ಇದ್ದರು.
ರೈತರ ಹೆಚ್ಚಿನ ಕಡೆಗಳಲ್ಲಿ ತೆoಗಿನ ಮರಗಳು ಕಂಗಿನ ಮರಗಳು ಹಾಗೂ ವಿವಿಧ ಜಾತಿಯ ಮರಗಳು ನೆಲಕ್ಕೂರುಳಿ ಬಿದ್ದು ಅಪಾರ ಪ್ರಮಾಣ ದ ನಷ್ಟ ವಾಗಿರುತ್ತದೆ ಹೆಚ್ಚಿನ ರೈತರ ಅಡಿಕೆ ಒಣಗಿಸಲು ಮಾಡಿ ರುವ ಸೋಲಾರ್ ಟಾರ್ಪಲ್ ಶೆಡ್ ನೆಲ ಸಮವಾಗಿರುತ್ತದೆ ಅಲ್ಲದೆ ಬಹುತೇಕ ಮನೆಗಳ ಹಂಚು, ಸಿಮೆಂಟ್ ಶೀಟ್ ಗಾಳಿಯ ರಭಸಕ್ಕೆ ಹಾರಿ ಹೋಗಿ ಅಪಾರ ಪ್ರಮಾಣದ ನಷ್ಟವನ್ನು ಅನುಭವಿಸಿದ್ದಾರೆ.
ಬಂಟ್ವಾಳ ಸಿದ್ದಕಟ್ಟೆ ಬಳಿ ಮಂಗಳವಾರ ಸಂಜೆಯ ವೇಳೆ ಮರವೊಂದು ರಸ್ತೆ ಗೆ ಉರುಳಿ ತಾತ್ಕಾಲಿಕವಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.