ಪಹಲ್ಗಾಮ್ ದಾಳಿ; ಉಗ್ರರ ಕೃತ್ಯವನ್ನು ಸಮಗ್ರ ರೂಪದಲ್ಲಿ ತನಿಖೆ ನಡೆಸಬೇಕಾಗಿದೆ: ಕೆ.ಅಶ್ರಫ್

ಮಂಗಳೂರು: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಮತ್ತು ಪ್ರವಾಸಿಗರ ಮೇಲಿನ ಗುಂಪು ಹತ್ಯೆಯಿಂದ 28 ಜನರ ಸಾವು ಖಂಡನೀಯ. ಉಗ್ರರ ಕೃತ್ಯವನ್ನು ಘನ ಭಾಷೆಯಲ್ಲಿ ಎದುರಿಸಬೇಕಾಗಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.
ಸಂತ್ರಸ್ತರಲ್ಲಿ ಕರ್ನಾಟಕದವರು ಇರುವುದು ಬಹು ನೋವಿನ ವಿಚಾರ. ಕಾಶ್ಮೀರವು ಒಂದು ಸಮೃದ್ಧ ಸ್ಥಿತಿಗೆ ತಲುಪುವ ಈ ಸಂದರ್ಭ ಇಂತಹ ಕೃತ್ಯ ಯಾವುದೇ ಕಾರಣಕ್ಕೂ ಸ್ವೀಕರಿಸುವಂತದ್ದಲ್ಲ.ರಕ್ತ ಪಾತದಿಂದ ಎಂದಿಗೂ ಶಾಂತಿ ನೆಲೆ ಗೊಳ್ಳದು ಎಂಬುದನ್ನು ಸರ್ವರೂ ಅರಿಯಬೇಕಿದೆ ಎಂದಿದ್ದಾರೆ.
ಉಗ್ರರ ಕೃತ್ಯವು ಮಾನವೀಯ ಮೌಲ್ಯವನ್ನು ದುರಂತಕ್ಕೀಡು ಮಾಡುವಂತಾಗಿದೆ. ಉಗ್ರರ ಕೃತ್ಯವನ್ನು ಸಮಗ್ರ ರೂಪದಲ್ಲಿ ತನಿಖೆ ನಡೆಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
Next Story