ವಿಟ್ಲ: ಮುಸ್ಲಿಂ ಒಕ್ಕೂಟ ವತಿಯಿಂದ ವಕ್ಫ್ ತಿದ್ದುಪಡಿ ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಾಗಾರ

ವಿಟ್ಲ: ಮುಸ್ಲಿಂ ಒಕ್ಕೂಟ ವಿಟ್ಲ ವತಿಯಿಂದ ವಕ್ಪ್ ತಿದ್ದುಪಡಿ ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಾಗಾರ ಬ್ರೈಟ್ ಆಡಿಟೋರಿಯಂ ನಲ್ಲಿ ನಡೆಯಿತು.
ಚಿಂತಕ, ಅಂಕಣಗಾರ ಶಿವಸುಂದರ್ ಬೆಂಗಳೂರು ಅವರು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟು ಮಾತನಾಡಿ ಮುಸ್ಲಿಮರಿಂದ ಆಸ್ತಿಯನ್ನು ಕಿತ್ತುಕೊಳ್ಳಲು ಮಾಡಿರುವ ಕರಾಳ ಕಾನೂನು ಆಗಿದೆ. ಬಿಜೆಪಿ ಮುಂದೆ ಬಾಬರ್ ಮಸೀದಿ, ಕಾಶ್ಮೀರಾ, ಸಮಾನ ನಾಗರಿಕ ಮಹಿತೆ ಮೂರು ಉದ್ದೇಶ ಇತ್ತು. 2014ರಲ್ಲಿ ಸ್ವಂತ ಬಲ ಬಂದಾಗ ಎಲ್ಲವನ್ನು ಮಾಡಿದರು. ಬಿಜೆಪಿ ಮಾತ್ರ ಹಿಂದೂಗಳ ಪರ ಇದೆ ಎಂದು ನಂಬಿಸಲು ಮೂರು ಉದ್ದೇಶ ಈಡೇರಿಸಿದೆ. 2024ರಲ್ಲಿ ಬಹುಮತ ಸಿಕ್ಕಿಲ್ಲ. ಮತ್ತೆ ಅಧಿಕಾರಕ್ಕೆ ಬರಲು ಹಿಂದೂ ಮುಸ್ಲಿಂ ಮಾಡಬೇಕೆಂಬ ಉದ್ದೇಶದಿಂದ ವಕ್ಫ್ ಕಾಯ್ದೆಗೆ ಕೈ ಹಾಕಿದ್ದಾರೆ. ರೈತರ ಜಮೀನು ಮುಸ್ಲಿಮರು ಕಿತ್ತುಕೊಳ್ಳುತ್ತಿದ್ದಾರೆ ಎಂಬ ಆರೋಪ ಮಾಡಲಾಯಿತು. ರೈತರ ಜಮೀನು ಕಿತ್ತುಕೊಂಡು ಕಾಂಗ್ರೆಸ್ ನವರು ಮುಸ್ಲಿಮರಿಗೆ ಕೊಡುತ್ತಿದ್ದಾರೆ ಎಂಬ ಕೋಮುವಾದ ಉಂಟು ಮಾಡಿದರು. ವಕ್ಫ್ ಅನ್ನು ನೈಜ ಮುಸ್ಲಿಂ ಎಂಬುದನ್ನು ಮೋದಿ ಮುಂದೆ ಸಾಬೀತು ಮಾಡಬೇಕಾಂತೆ. ನಮಾಝ್ ಮಾಡುವಾಗ ವೀಡಿಯೋ ಮಾಡಬೇಕಾ? ಸರಕಾರ ಒಂದು ಧರ್ಮದ ವಿಚಾರದಲ್ಲಿ ತಾರತಮ್ಯ ಮಾಡಬಾರದು ಎಂಬ ನಿಯಮ ಇದೆ. ಆದ್ರೆ ಸರಕಾರ ಮಾಡುತ್ತಿದೆ ಎಂದು ಹೇಳಿದರು.
ಹೋರಾಟಕ್ಕೆ ಮಹಿಳೆಯರು, ಮುಸ್ಲಿಮೇತರರ ಕೊರತೆ ಕಂಡು ಬರುತ್ತಿದ್ದು, ಎಲ್ಲರೂ ಜತೆಯಾಗಿ ಹೋರಾಟಕ್ಕೆ ಇಳಿಯಬೇಕು ಎಂದರು.
ಮುಸ್ಲಿಂ ಒಕ್ಕೂಟದ ವಿ.ಎಚ್ ಅಶ್ರಪ್, ವಿಟ್ಲ ಹೋಬಳಿಯ ಎಲ್ಲಾ ಮಸೀದಿಯ ಖತೀಬರು, ಅಧ್ಯಕ್ಷರು ಉಪಸ್ಥಿತರಿದ್ದರು. ಎಂ ಎಸ್ ಮಹಮ್ಮದ್ ಪ್ರಸ್ತಾವನೆ ಮಾಡಿದರು. ಖಲಂದರ್ ಪರ್ತಿಪ್ಪಾಡಿ ಸ್ವಾಗತಿಸಿದರು. ಶಾಕೀರ್ ಅಳಕೆಮಜಲು ವಂದಿಸಿದರು.





