ಉಳ್ಳಾಲ ದರ್ಗಾ ಉರೂಸ್: ಕ್ಯಾಶ್ ಕೌಂಟರ್, ಸಿಹಿಪಾನೀಯ ವಿತರಣೆಗೆ ಚಾಲನೆ

ಉಳ್ಳಾಲ: ಉಳ್ಳಾಲ ಸಯ್ಯದ್ ಮದನಿ ದರ್ಗಾ ಉರೂಸ್ ಪ್ರಯುಕ್ತ ಭಕ್ತಾದಿಗಳಿಗೆ ನೀಡುವ ಸಿಹಿ ಪಾನಿಯ ಹಾಗೂ ಕ್ಯಾಶ್ ಕೌಂಟರ್ ಗೆ ಗುರುವಾರ ಚಾಲನೆ ನೀಡಲಾಯಿತು.
ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ತಂಙಳ್ ಕೂರತ್ ದುಅ ನೆರವೇರಿಸುವ ಮೂಲಕ ಕ್ಯಾಶ್ ಕೌಂಟರ್ ಗೆ ಚಾಲನೆ ನೀಡಿದರು.
ಸಿಹಿ ಪಾನೀಯ ವಿತರಣೆ ಗೆ ಸ್ಪೀಕರ್ ಯುಟಿ ಖಾದರ್ ಚಾಲನೆ ನೀಡಿದರು. ದರ್ಗಾ ಅಧ್ಯಕ್ಷ ಬಿ ಜಿ ಹನೀಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ದಲ್ಲಿ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಗಳಾದ ಇಸ್ಹಾಕ್, ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಕ್ಯಾಶ್ ಕೌಂಟರ್ ಮುಖ್ಯಸ್ಥ ಇಸ್ಮಾಯಿಲ್ ಮೋನು ಮತ್ತಿತರರು ಉಪಸ್ಥಿತರಿದ್ದರು.
Next Story





