ಉಳ್ಳಾಲ ಉರೂಸ್ ಪ್ರಯುಕ್ತ ದ್ಸಿಕ್ರ್ ಮಜ್ಲಿಸ್

ಉಳ್ಳಾಲ: ಇಲ್ಲಿನ ಕೇಂದ್ರ ಜುಮ್ಮಾ ಮಸೀದಿ ಹಾಗೂ ಸಯ್ಯಿದ್ ಮದನಿ ದರ್ಗಾ ಸಮಿತಿ ಇದರ ಆಶ್ರಯ ದಲ್ಲಿ ಉಳ್ಳಾಲ ಉರೂಸ್ ಪ್ರಯುಕ್ತ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮ ಗುರುವಾರ ಸಂಜೆ ಕೇಂದ್ರ ಮಸೀದಿಯಲ್ಲಿ ನಡೆಯಿತು.
ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ತಂಙಳ್ ದ್ಸಿಕ್ರ್ ಮಜ್ಲಿಸ್ ನೇತೃತ್ವ ವಹಿಸಿದ್ದರು.
ದರ್ಗಾ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಸಯ್ಯಿದ್ ಹಾಮಿದ್ ಇಂಬಿಚ್ಚಿ ತಂಙಳ್, ಅರೆಬಿಕ್ ಕಾಲೇಜು ಪ್ರೊ. ಇಬ್ರಾಹಿಂ ಅಹ್ಸನಿ, ಇಸ್ಮಾಯಿಲ್ ಮೋನು ಉಪಸ್ಥಿತರಿದ್ದರು.
Next Story





