ಭಯೋತ್ಪಾದಕರ ದಾಳಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಖಂಡನೆ

ಮುಹಮ್ಮದ್ ಮಸೂದ್
ಮಂಗಳೂರು : ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ತೀವ್ರವಾಗಿ ಖಂಡಿಸಿದ್ದಾರೆ.
ದಾಳಿಕೋರರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ದಾಳಿಯ ನೆಪದಲ್ಲಿ ಭಾರತೀಯರು ಪರಸ್ಪರ ಕಚ್ಚಾಡಿಸುವ ವಿದೇಶಿ ಶಕ್ತಿಗಳ ಶ್ರಮವನ್ನು ವಿಫಲಗೊಳಿಸಬೇಕು. ದಾಳಿಕೋರರಿಂದ ಪ್ರಾಣವನ್ನು ಪಣಕ್ಕಿಟ್ಟು ಹೋರಾಡು ತ್ತಿರುವ ಕಾಶ್ಮೀರಿ ಮುಸ್ಲಿಮರು ಸೇರಿದಂತೆ ಎಲ್ಲರೂ ಒಂದಾಗಿ ಭಯೋತ್ಪಾದಕರನ್ನು ಎದುರಿಸಬೇಕು ಎಂದು ಮುಹಮ್ಮದ್ ಮಸೂದ್ ಕರೆ ನೀಡಿದರು.
Next Story





