ಕಾರ್ಕಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಪ್ರತಿಭಟನೆ

ಕಾರ್ಕಳ : ಈ ದೇಶವನ್ನು ಇಸ್ಲಾಂ ರಾಷ್ಟ್ರ ಮಾಡಬೇಕೆನ್ನುವ ಹೊಂಚು ನಡೆಯುತ್ತಿದೆ. ನಮ್ಮ ಮುಂದಿನ ಪೀಳಿಗೆ ಹಿಂದೂವಾಗಿ ಉಳಿಯಬೇಕಾದರೇ ಹಿಂದುಗಳಾದ ನಾವೆಲ್ಲರೂ ಜಾಗೃತರಾಗಬೇಕಾಗಿದೆ. ನಮ್ಮ ಗ್ರಾಮಗಳಲ್ಲಿ ಹಿಂದೂ ವಿರೋಧಿಗಳು, ಜಿಹಾದಿಗಳು ಇರಬಹುದು ಎಚ್ವರ ವಹಿಸುವುದು ಅಗತ್ಯ ಎಂದು ಹಿಂದುತ್ವ ಮುಖಂಡ ಸುನಿಲ್ ಕೆ.ಆರ್ ಹೇಳಿದರು.
ಕಾರ್ಕಳ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನಾ ಕೃತ್ಯವನ್ನು ಖಂಡಿಸಿ ಕಾರ್ಕಳ ಬಸ್ ನಿಲ್ದಾಣ ಬಳಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ಹಿಂದುತ್ವ ಮುಖಂಡರಾದ ನವೀನ್ ನಾಯಕ್, ಅವಿನಾಶ್ ಶೆಟ್ಟಿ, ಚೇತನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Next Story





