ದೇರಳಕಟ್ಟೆ: ಪಹಲ್ಗಾಮ್ ದಾಳಿ ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ದೇರಳಕಟ್ಟೆ: ಭಯೋತ್ಪಾದಕರು ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ದಾಳಿಯ ನೋವು ಎಲ್ಲರಲ್ಲೂ ಇದೆ. ಕೇಂದ್ರ ಸರ್ಕಾರ ಕಾಶ್ಮೀರ ದಲ್ಲಿ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ.ಜನರ ಜೀವ ಉಳಿಸುವಲ್ಲಿ ಸರ್ಕಾರಕ್ಕೆ ಸಾಧ್ಯ ಆಗದಿರುವುದು ದುರಂತ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಅಶ್ರಫ್ ಕೆಸಿರೋಡ್ ಹೇಳಿದರು.
ಅವರು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೆ ಗೌರವ ಮೌನ ಪ್ರಾರ್ಥನೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯ ದ ವಿರುದ್ಧ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇರಳಕಟ್ಟೆ ಯಲ್ಲಿ ನಡೆದ ಪ್ರತಿಭಟನಾ ಸಭೆ ಯಲ್ಲಿ ಮಾತನಾಡಿದರು.
ಘಟನೆ ಯೊಂದು ನಡೆದು ಹೋಗಿದೆ. ಇನ್ನು ಸರ್ಕಾರ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕು.ವಕ್ಫ್ ಸಹಿತ ಜನರನ್ನು ಗೊಂದಲಕ್ಕೀಡು ಮಾಡುವ ಕೆಲವು ಕಾನೂನು ಜಾರಿ ತರುವ ಬದಲು ದೇಶದ ಪ್ರಜೆಗಳ ರಕ್ಷಣೆ ಮಾಡುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮುಸ್ತಫಾ ಹರೇಕಳ ಮಾತನಾಡಿ, ಹಿಂದುಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಸುದ್ದಿ ಹಬ್ಬಿಸಿ ಲಾಗುತ್ತಿದೆ.ಇದು ಶುದ್ಧ ಸುಳ್ಳು.ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ಈ ಕೃತ್ಯ ಎಸಗಿದ್ದಾರೆ.ಈ ವಿಚಾರದಲ್ಲಿ ಜಾತಿ ಲೆಕ್ಕಾಚಾರ ಮಾಡಬೇಕಿಲ್ಲ. ಈ ಘಟನೆಯನ್ನು ಅಸ್ತ್ರ ವಾಗಿ ಬಳಸಿ ರಾಜಕೀಯ ಬೇಕಿಲ್ಲ.ಈ ಘಟನೆ ಗೆ ಸಂಬಂಧಿಸಿ ಕೇಂದ್ರ ಕಾನೂನು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಕೃತ್ಯ ದಲ್ಲಿ ಹಲವು ಮಂದಿ ಮೃತರಾದರೆ, ಇನ್ನೊಂದೆಡೆ ರಾಜಕಾರಣಿಗಳ ರಾಜಕೀಯ ಶುರು ಆಗಿದೆ.ನಮಗೆ ರಾಜಕೀಯ ಬೇಡ.ನಮಗೆ ನ್ಯಾಯ ಬೇಕು.ಬದುಕಲು ಸುರಕ್ಷಿತ ನಾಡು ಬೇಕು. ಇದಕ್ಕೆ ಪೂರಕವಾದ ವ್ಯವಸ್ಥೆ ಕೇಂದ್ರ ಮಾಡಬೇಕು ಎಂದರು.
ಸುರೇಖ ಚಂದ್ರ ಹಾಸ್, ದಿನೇಶ್ ಕುಂಪಲ, ರಹ್ಮಾನ್ ಕೋಡಿಜಾಲ್, ಮೊಹಮ್ಮದ್ ಮೋನು ಮೌಶೀರ್ ಅಹ್ಮದ್ ಸಾಮಾನಿಗೆ ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ರಾದ ಅಬ್ದುಲ್ ರಹಿಮಾನ್ ಕೋಡಿಜಾಲ್, ಎನ್ ಎಸ್ ಕರೀಂ, ಮೆಸ್ಕಾಂ ಕೊಣಾಜೆ ಉಪ ವಿಭಾಗದ ಕಾರ್ಯಾಧ್ಯಕ್ಷ ಟಿ.ಎಸ್.ಅಬೂಬಕ್ಕರ್, ಸತ್ತಾರ್ ಸಿ.ಎಂ, ದೇರಳಕಟ್ಟೆ,ಕಬೀರ್ ದೇರಳಕಟ್ಟೆ, ಯೂಸುಫ್ ಬಾವ, ಕೆಡಿಪಿ ಸದಸ್ಯ ಹಮೀದ್ ಕಿನ್ಯ ,ಚಂಚಲಾಕ್ಷಿ, ಜೆಸಿಂತಾ ಮೆಂಡೋನ್ಸ, ರವಿರಾಜ್ ಶೆಟ್ಟಿ ದೇರಳಕಟ್ಟೆ, ಸಾಹಿಲ್ ಮಂಚಿಲ ,ದೀಪಕ್ ಪಿಲಾರ್, ನಾಗೇಶ್, ದಿನೇಶ್ ಪೂಜಾರಿ, ಮೊಹಮ್ಮದ್, ಅಬ್ದುಲ್ ಸಲಾಂ ಉಚ್ಚಿಲ, ಅಚ್ಯುತ ಗಟ್ಟಿ, ಇಸಾಕ್, ವೈಭವ್ ಶೆಟ್ಟಿ ತಲಪಾಡಿ,ಕೋಟೆಕಾರ್,ಶ್ರಿಧರ ಆಳ್ವ , ಪುರುಷೋತ್ತಮ ಶೆಟ್ಟಿ, ನಝರ್ ಶಾ ಪಟ್ಟೋರಿ, ಬಶೀರ್ ಕೊಳಂಗರೆ ಮತ್ತಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಸ್ವಾಗತಿಸಿದರು.ಎ.ಕೆ.ಅಬ್ದುಲ್ ರಹಿಮಾನ್ ಕೋಡಿಜಾಲ್ ವಂದಿಸಿದರು.







