ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ದ.ಕ. ಜಿಲ್ಲಾದ್ಯಂತ ವಿದ್ಯುತ್ ದೀಪ ಆರಿಸಿ ಪ್ರತಿಭಟನೆ

ಮಂಗಳೂರು, ಎ.30: ಅಖಿಲ ಭಾರತ ಪರ್ಸನಲ್ ಲಾ ಬೋರ್ಡ್‌ನ ಕರೆಯಂತೆ ಕೇಂದ್ರ ಸರಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಬುಧವಾರ ರಾತ್ರಿ 9ರಿಂದ 9:15ರವರೆಗೆ (15 ನಿಮಿಷಗಳ ಕಾಲ) ದ.ಕ.ಜಿಲ್ಲಾದ್ಯಂತ ಮುಸ್ಲಿಮರು ತಮ್ಮ ಮನೆ ಮತ್ತು ಅಂಗಡಿ ಮುಂಗಟ್ಟುಗಳ ವಿದ್ಯುತ್ ದೀಪಗಳನ್ನು ಆರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ ಗಮನ ಸೆಳೆದರು.
ವಿದ್ಯುತ್ ದೀಪಗಳನ್ನು ಆರಿಸಿ ಪ್ರತಿಭಟನೆ ನಡೆಸುವಂತೆ ಎಲ್ಲೆಡೆ ವ್ಯಾಪಕ ಪ್ರಚಾರ ಮಾಡಲಾಗಿತ್ತು. ಅದರಂತೆ ಬಹುತೇಕ ಮುಸ್ಲಿಮರು ತಮ್ಮ ಮನೆಗಳು, ಅಂಗಡಿಗಳ ವಿದ್ಯುತ್ ದೀಪ ಆರಿಸಿ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Next Story







