ಗುಂಪು ಹಲ್ಲೆಯಿಂದ ಮೃತಪಟ್ಟ ಅಶ್ರಫ್ ಮನೆಗೆ ಸರ್ವ ಪಕ್ಷ ಹೋರಾಟ ಸಮಿತಿ ಭೇಟಿ

ಮಂಗಳೂರು: ನಗರ ಹೊರವಲಯದ ಕುಡುಪು ಬಳಿ ಗುಂಪು ಹಲ್ಲೆಯಿಂದ ಮೃತಪಟ್ಟ ಕೇರಳದ ವಯನಾಡಿನ ಅಶ್ರಫ್ ಮನೆಗೆ ಗುರುವಾರ ಸರ್ವಪಕ್ಷ ಹೋರಾಟ ಸಮಿತಿಯ ಮುಖಂಡ ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ವೆಂಘರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಪರಪುರ್ ಜೊತೆ ಭೇಟಿ ನೀಡಿ ಹೋರಾಟದ ಮುಂದಿನ ರೂಪುರೇಷದ ಬಗ್ಗೆ ಚರ್ಚೆ ನಡೆಸಿತು.
ಮಲಪ್ಪುರಂ ಜಿಲ್ಲೆಯ ವೆಂಘರ ತಾಲೂಕಿನ ಪರಪುರ ಚೋಲಕುಂಡ್‌ನಲ್ಲಿ ನಡೆದ ಸರ್ವ ಪಕ್ಷದ ಹೋರಾಟ ಸಮಿತಿ ಸಭೆಯಲ್ಲಿ ಮೃತ ವ್ಯಕ್ತಿ ಅಶ್ರಫ್‌ರ ಕುಟುಂಬಕ್ಕೆ ನ್ಯಾಯ ಒದಗಿಸಲು ಸರಕಾರದ ವತಿಯಿಂದ ಪರಿಹಾರ ನೀಡಲು ಒತ್ತಾಯಿಸಲಾಗಿದೆ ಎಂದರು.
ಮಾಜಿ ಸಂಸದ, ಸ್ಥಳೀಯ ಶಾಸಕ ಮತ್ತು ಕೇರಳ ರಾಜ್ಯದ ವಿರೋಧ ಪಕ್ಷದ ಉಪ ನಾಯಕ ಪಿಕೆ ಕುಂಞಲಿ ಕುಟ್ಟಿ ಮಾತನಾಡಿ ಕರ್ನಾಟಕ ಸರಕಾರ ಮತ್ತು ಕೇರಳ ಸರಕಾರ ಮೃತ ಅಶ್ರಫ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ನಾಸರ್ ಪರಪೂರ್ ಅಧ್ಯಕ್ಷತೆ ವಹಿಸಿದರು. ಕುಟುಂಬಕ್ಕೆ ನ್ಯಾಯ, ಪರಿಹಾರ, ಆರೋಪಿಗಳಿಗೆ ಕಠಿಣ ಶಿಕ್ಷೆ ಬಗ್ಗೆ ಕಾನೂನು ಹೋರಾಟ, ಕೇರಳ ಮತ್ತು ಕರ್ನಾಟಕ ಸರಕಾರ ವನ್ನು ಸಂಪರ್ಕಿಸಲು ಹೋರಾಟ ಮಾಡಲು ಕಾನೂನು ತಜ್ಞರ ಸಮಿತಿ, ಸಾರ್ವಜನಿಕ ಸಭೆ, ಜನ ಸಂಪರ್ಕ ಸಭೆ ಸಹಿತ ಆರ್ಥಿಕ ಸಮಿತಿ ರಚಿಸಲಾಯಿತು.
ಅಡ್ವೋಕೇಟ್ ಫೈಸಲ್ ಬಾಬು, ಅಶ್ರಫ್ ಅಲಿ, ಕೃಷ್ಣಕುಮಾರ್, ಮಜೀದ್ ಮಣ್ಣಿಸ್ಸೇರಿ, ಅಪ್ಪುಕುಟ್ಟನ್, ಹಬೀಬ್ ಜಹಾನ್, ಎಂಸಿ ಸುಬ್ರಮಣ್ಯನ್, ಶಾಜಿ ಕುಮಾರ್, ಸುರೇಶ್ ಬಾಬು ಮಾತನಾಡಿದರು.







