ಮಂಗಳೂರು: ಮನೆಗೆ ನುಗ್ಗಿ ಚಿನ್ನಾಭರಣ ಕಳವು; ಪ್ರಕರಣ ದಾಖಲು

ಮಂಗಳೂರು, ಮೇ 1: ನಗರದ ಕಾಪ್ರಿಗುಡ್ಡ-ಫಳ್ನೀರ್‌ನ ಮನೆಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಮುಹಮ್ಮದ್ ಅಯ್ಯೂಬ್ ಎಂಬವರಿಗೆ ಸೇರಿದ ಪಳ್ನೀರ್‌ನ ಅಪಾರ್ಟ್‌ಮೆಂಟ್‌ವೊಂದರ 2ನೇ ಮಹಡಿಯಲ್ಲಿರುವ ಮನೆಯಿಂದ ಕಳ್ಳತನ ನಡೆದಿದೆ.
ಮುಹಮ್ಮದ್ ಅಯ್ಯೂಬ್ ಎ.27ರಂದು ಬೆಳಗ್ಗೆ 10:30ಕ್ಕೆ ತನ್ನ ಹೆಂಡತಿ, ಮಕ್ಕಳೊಂದಿಗೆ ಮಡಿಕೇರಿ, ಮೈಸೂರಿಗೆ ಪ್ರವಾಸಕ್ಕೆ ತೆರಳಿದ್ದರು. ಎ.29ರಂದು ಮನೆಗೆ ಬಂದು ಬೆಡ್ ರೂಮ್‌ನಲ್ಲಿದ್ದ ಹೈಡ್ರೋಲಿಕ್ ಬೆಡ್ ತೆರೆದು ನೋಡಿದಾಗ ಹಿರಿಯ ಮಗಳ ಚಿನ್ನಾಭರಣ ಇರಲಿಲ್ಲ ಎನ್ನಲಾಗಿದೆ. ಯಾರೋ ಈ ಮನೆಯಲ್ಲಿದ್ದ 320 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ವರದಿಯಾಗಿದೆ. ಕಳವಾದ ಚಿನ್ನಾಭರಣದ ಮೌಲ್ಯ 6,50,000 ರೂ. ಆಗಿರಬಹುದೆಂದು ಅಂದಾಜಿಸಲಾಗಿದೆ.
Next Story





