ಮಾಣಿ : ಸೋಶಿಯಲ್ ಇಖ್ವಾ ಫೆಡರೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ

ಬಂಟ್ವಾಳ : ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರವು ಕೊಡಾಜೆ 'ಡಿಗ್ನಿಟಿ ಸ್ಕೂಲ್ ನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ರಝಾಕ್ ಮಾಸ್ಟರ್ ಅನಂತಾಡಿ, ಇಫ್ತಿಕಾರ್ ಅಹ್ಮದ್, ಸಲೀಲ ಕಡಂಬು, ಲಫೀರಾ ಸುಹೈರಾ, ಅಸ್ಮಾ ಗಡಿಯಾರ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಎರಡು ಹಂತಗಳಲ್ಲಿ ಆಪ್ತ ಸಮಾಲೋಚನೆ ನಡೆಸಿ ಶೈಕ್ಷಣಿಕ ಗುರಿ ನಿಶ್ಚಯಿಸಲಾಯಿತು.
ಸೋಶಿಯಲ್ ಇಖ್ವಾ ಫೆಡರೇಶನ್ ಅಧ್ಯಕ್ಷ ರಹೀಂ ಸುಲ್ತಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಲಹೆಗಾರ ಹನೀಫ್ ಖಾನ್ ಕೊಡಾಜೆ, ಶಬೀರ್ ಕಡೇಶ್ವಾಲ್ಯ ಉಪಸ್ಥಿತರಿದ್ದರು. ರಶೀದ್ ನೀರಪಾದೆ ಸ್ವಾಗತಿಸಿ ರಿಯಾಝ್ ಕಲ್ಲಾಜೆ ವಂದಿಸಿದರು. ಝೈನುಲ್ ಅಕ್ಬರ್ ಕಡೇಶ್ವಾಲ್ಯ ನಿರೂಪಿಸಿದರು.
Next Story





